Thu. Mar 5th, 2026

ಹಸಿರುಲೋಕ ವತಿಯಿಂದ ಮನೆಗೊಂದು ಗಿಡ ಅಭಿಯಾನ

Share this with Friends

ಮೈಸೂರು,ಜೂ.29: ಮೈಸೂರಿನ ಹಸಿರುಲೋಕ ವತಿಯಿಂದ ಚಾಮರಾಜಪುರಂ ಬಡಾವಣೆಯ ಮನುವನ ಉದ್ಯಾನವನದಲ್ಲಿ ಜೂ. 30ರಂದು ಮನೆಗೊಂದು ಗಿಡ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಳಗ್ಗೆ 9ಘಂಟೆಗೆ ಸಾರ್ವಜನಿಕರಿಗೆ ಆಯುರ್ವೇದ ಸಸಿ ವಿತರಿಸುವ ಮೂಲಕ ಮನೆಗೊಂದು ಗಿಡ ಕಾರ್ಯಕ್ರಮ ಹಮ್ಮಿಕೊಳ್ಳಾಲಾಗಿದೆ ಎಂದು ಹಸಿರುಲೋಕ ಮೈಸೂರು ಸಂಚಾಲಕ ಅಜಯ್ ಶಾಸ್ತ್ರಿ ತಿಳಿಸಿದ್ದಾರೆ,

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಸಸಿಗಳನ್ನ ನೆಟ್ಟು ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನ ವಿತರಿಸುವ ಮೂಲಕ ಮನೆಗೊಂದು ಗಿಡ ಅಭಿಯಾನಕ್ಕೆ ಚಾಲನೆ ನೀಡುವರು.

ಕಾರ್ಯಕ್ರಮದಲ್ಲಿ ಮಾ. ಮೋಹನ್, ಜೋಗಿ ಮಂಜು, ನಗರಪಾಲಿಕೆ ಮಾಜಿ ಸದಸ್ಯೆ ಸೌಮ್ಯ ಉಮೇಶ್, ಜೀವಧಾರ ಗಿರೀಶ್ , ರಾಕೇಶ್ ಗೌಡ,ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ ಮತ್ತಿತರರು ಭಾಗವಹಿಸಲಿದ್ದಾರೆ.


Share this with Friends

Related Post