Tue. Sep 22nd, 2026

ಬಿಟ್‌ ಕಾಯಿನ್‌ ಪ್ರಕರಣ: ಶ್ರೀಕಿ ಸೇರಿ 3 ಮಂದಿಗೆ ಜಾಮೀನು

Share this with Friends

ತುಮಕೂರು,ಜು.24: ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಪ್ರಮುಖ‌ ಆರೋಪಿ ಶ್ರೀಕಿ ಸೇರಿದಂತೆ ಮೂರು ಮಂದಿಗೆ ತುಮಕೂರು ನ್ಯಾಯಾಲಯ ಜಾಮೀನು ನೀಡಿದೆ.

ಶ್ರೀಕಿ ಹಾಗೂ ರಮೇಶ್, ರಬೀನ್ ಖಂಡೇಲ್ ವಾಲಗೆ ಜಾಮೀನು ನೀಡಲಾಗಿದೆ,ಈ ಮೂವರು ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿದೆ.

ನ್ಯಾಯಾಧೀಶ ಎನ್.ಸುಬ್ರಹ್ಮಣ್ಯ ಅವರು ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ.

ಶ್ರೀಕಿಯಿಂದ 50 ಸಾವಿರ ಮೊತ್ತದ ಬಾಂಡ್ ಹಾಗೂ ಓರ್ವ ವ್ಯಕ್ತಿ ಶೂರಿಟಿ ಪಡೆಯಲಾಗಿದೆ. ರಾಬೀನ್ ಖಂಡೇಲ್ ವಾಲ ಬಳಿ 25 ಸಾವಿರ ಮೌಲ್ಯದ ಬಾಂಡ್ ಹಾಗೂ ಓರ್ವ ವ್ಯಕ್ತಿಯ ಶೂರಿಟಿ ಪಡೆಯಲಾಗಿದೆ.

ಚಾರ್ಜ್‌ಶೀಟ್‌ ಸಲ್ಲಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಾಮೀನು ಮಂಜೂರು ಮಾಡಲಾಗಿದೆ.


Share this with Friends

Related Post