Tue. Dec 24th, 2024

ಸುಟ್ಟು ಹೋದರಸ್ತೆ ಬದಿ ನಿಂತಿದ್ದ ಆಂಬ್ಯುಲೆನ್ಸ್

Share this with Friends

ಮೈಸೂರು, ಜು.7: ರಸ್ತೆ ಬದಿ ನಿಲ್ಲಿಸಿದ್ದ ಅಂಬ್ಯುಲೆನ್ಸ್ ಇದ್ದಕ್ಕಿದ್ದಂತೆ ಸುಟ್ಟುಹೋದ ಘಟನೆ ನಗರದಲ್ಲಿ ನಡೆದಿದೆ.

ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಪ್ಪ ವೃತ್ತದ ಬಳಿ ನಡೆದಿದ್ದು,
ದೇವರಾಜ ಸಂಚಾರಿ ಠಾಣಾ ಪೊಲೀಸರ ಸಮಯಪ್ರಜ್ಞೆ ಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

108 ತುರ್ತುವಾಹನವನ್ನ ದಾಸಪ್ಪ ವೃತ್ತದ ಬಳಿ ನಿಲ್ಲಿಸಲಾಗಿತ್ತು,ಇಂಜಿನ್ ಹೆಚ್ಚು ಬಿಸಿಯಾದ ಕಾರಣ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ದೇವರಾಜ ಸಂಚಾರಿ ಠಾಣೆ
ಇನ್ಸ್ ಪೆಕ್ಟರ್ ಮಮತಾ ಅವರು ಸಮಯ ಪ್ರಜ್ಞೆ ತೋರಿ ವಾಹನದಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಬ್ಯುಲೆನ್ಸ್ ಸುಟ್ಟುಹೋದ ಕೆಲವೇ ಮೀಟರ್ ಗಳ ಅಂತರದಲ್ಲಿ ಇದ್ದ ಪೆಟ್ರೋಲ್ ಬಂಕ್ ಗೆ ಬೆಂಕಿ ತಗುಲಿ ಹಾನಿಯಾಗುವುದು ತಪ್ಪಿದಂತಾಗಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ,
ಅಧೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ,ಈ ಸಂಬಂಧ ದೇವರಾಜ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Share this with Friends

Related Post