Thu. Nov 12th, 2026

‘ಬೆಂಗಳೂರು ಜಾತ್ರೆ 2026’: ಸಂಗೀತ ಮತ್ತು ನೃತ್ಯ ಪ್ರತಿಭೆಗಳಿಗೆ ಭರ್ಜರಿ ಅವಕಾಶ; ಲಕ್ಷಾಂತರ ರೂ. ಬಹುಮಾನ

Share this with Friends

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ‘ಬೆಂಗಳೂರು ಜಾತ್ರೆ 2026’ರ ಅಂಗವಾಗಿ ನಗರದ ಯುವ ಸಂಗೀತ ಮತ್ತು ನೃತ್ಯ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಬೃಹತ್ ವೇದಿಕೆ ಕಲ್ಪಿಸಲಾಗಿದೆ. ಸಂಗೀತ ಬ್ಯಾಂಡ್‌ಗಳಿಗಾಗಿ ‘ನಮ್ಮ ಸೌಂಡ್’ (Namma Sound) ಹಾಗೂ ನೃತ್ಯ ತಂಡಗಳಿಗಾಗಿ ‘ನಮ್ಮ ಗ್ರೂವ್’ (Namma Groove) ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಉಚಿತ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾರು ಭಾಗವಹಿಸಬಹುದು?

ಪ್ರೌಢಶಾಲೆ (ಹೈಸ್ಕೂಲ್), ಪಿಯುಸಿ ಮತ್ತು ಪದವಿ ಕಾಲೇಜು ತಂಡಗಳು ಸೇರಿದಂತೆ ಖಾಸಗಿ ಸಂಗೀತ ಬ್ಯಾಂಡ್‌ಗಳು ಹಾಗೂ ನೃತ್ಯ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಆಕರ್ಷಕ ನಗದು ಬಹುಮಾನ:

ಸಂಗೀತ ಮತ್ತು ನೃತ್ಯ ಎರಡೂ ವಿಭಾಗಗಳಲ್ಲೂ ವಿಜೇತರಾಗುವ ತಂಡಗಳಿಗೆ ಪ್ರತ್ಯೇಕವಾಗಿ ಭರ್ಜರಿ ನಗದು ಬಹುಮಾನ ನೀಡಲಾಗುತ್ತಿದೆ:

ಪ್ರಥಮ ಬಹುಮಾನ: 1,00,000 ರೂ.

ದ್ವಿತೀಯ ಬಹುಮಾನ: 50,000 ರೂ.

ತೃತೀಯ ಬಹುಮಾನ: 25,000 ರೂ.

ಪ್ರಮುಖ ದಿನಾಂಕಗಳು:

ನೋಂದಣಿಗೆ ಕೊನೆಯ ದಿನ ಮತ್ತು ವಿಡಿಯೋ ಸ್ಕ್ರೀನಿಂಗ್: ನವೆಂಬರ್ 25, 2026

ಪ್ರಾಥಮಿಕ ಸುತ್ತು (Prelims): ಡಿಸೆಂಬರ್ 5, 2026

ಅಂತಿಮ ಸುತ್ತು (Grand Finale): ಡಿಸೆಂಬರ್ 13, 2026

ಆಸಕ್ತ ತಂಡಗಳು ನಿಗದಿತ ಗೂಗಲ್ ಫಾರ್ಮ್ ಲಿಂಕ್ ಮೂಲಕ ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ ಮೊಬೈಲ್ ಸಂಖ್ಯೆ: 79756 07542 ಅಥವಾ 84317 08550 ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Share this with Friends

Related Post