Mon. Dec 23rd, 2024

ಬೆಂಗಳೂರಲ್ಲಿ ಧೂಮಪಾನಿಗಳಿಗೆ ಶಾಕ್ ನೀಡಿದ ಪೊಲೀಸ್ ಕಮಿಷನರ್

Share this with Friends

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಲ್ಲಾ ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಧೂಮಪಾನ ಸ್ಥಳ ತೆರವು ಮಾಡುವಂತೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕಟ್ಟು ನಿಟ್ಟಾಗಿ ನಿಯಮ ಪಾಲನೆಗೆ ಆದೇಶ ನೀಡಲಾಗಿದ್ದು, ಹೋಟೆಲ್, ಪಬ್ , ರೆಸ್ಟೋರೆಂಟ್ ಗಳಲ್ಲಿ ಅಕ್ರಮವಾಗಿ ನಿಗದಿ ಪಡಿಸಿರುವ ಧೂಮಪಾನ ಸ್ಥಳ ಅಥವಾ ಕೊಠಡಿಗಳನ್ನು ತೆರವು ಮಾಡಬೇಕು.

ಬಿಬಿಎಂಪಿ ಎನ್ ಒಸಿಯಲ್ಲಿ ತಿಳಿಸಿದ ಮಾನದಂಡದಂತೆ ಸ್ಥಳಗಳನ್ನು ನಿಗದಿ ಮಾಡಬೇಕು ಎಂದು ತಿಳಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಆಹಾರ, ನೀರು, ಪಾನಿಯ, ತಂಬಾಕು ಉತ್ಪನ್ನ ಒದಗಿಸುವುದು, ಪೂರೈಸುವುದನ್ನು ನಿಷೇಧಿಸಲಾಗಿದೆ. ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು. ಧೂಮಪಾನಿಗಳಲ್ಲದವರನ್ನು ಹಾನಿಕಾರ ತಂಬಾಕು ಹೊಗೆಯಿಂದ ರಕ್ಷಿಸುವುದು ಮುಖ್ಯ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.


Share this with Friends

Related Post