ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಲ್ಲಾ ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಧೂಮಪಾನ ಸ್ಥಳ ತೆರವು ಮಾಡುವಂತೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕಟ್ಟು ನಿಟ್ಟಾಗಿ ನಿಯಮ ಪಾಲನೆಗೆ ಆದೇಶ ನೀಡಲಾಗಿದ್ದು, ಹೋಟೆಲ್, ಪಬ್ , ರೆಸ್ಟೋರೆಂಟ್ ಗಳಲ್ಲಿ ಅಕ್ರಮವಾಗಿ ನಿಗದಿ ಪಡಿಸಿರುವ ಧೂಮಪಾನ ಸ್ಥಳ ಅಥವಾ ಕೊಠಡಿಗಳನ್ನು ತೆರವು ಮಾಡಬೇಕು.
ಬಿಬಿಎಂಪಿ ಎನ್ ಒಸಿಯಲ್ಲಿ ತಿಳಿಸಿದ ಮಾನದಂಡದಂತೆ ಸ್ಥಳಗಳನ್ನು ನಿಗದಿ ಮಾಡಬೇಕು ಎಂದು ತಿಳಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಆಹಾರ, ನೀರು, ಪಾನಿಯ, ತಂಬಾಕು ಉತ್ಪನ್ನ ಒದಗಿಸುವುದು, ಪೂರೈಸುವುದನ್ನು ನಿಷೇಧಿಸಲಾಗಿದೆ. ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು. ಧೂಮಪಾನಿಗಳಲ್ಲದವರನ್ನು ಹಾನಿಕಾರ ತಂಬಾಕು ಹೊಗೆಯಿಂದ ರಕ್ಷಿಸುವುದು ಮುಖ್ಯ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
- ಬೇರೆಯವರ ಬಳಿ ಆಟ ಆಡಿದಂಗೆ ನನ್ನ ಬಳಿ ಆಡಬೇಡಿ:ಎಕ್ಸ್ ನಲ್ಲಿ ಕೆಣಕಿದ ಪ್ರಿಯಾಂಕ ಖರ್ಗೆಗೆ ತಿರುಗೇಟು ಕೊಟ್ಟ ಹೆಚ್ಡಿಕೆ
- ಗೃಹಲಕ್ಷ್ಮಿಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ವಿದ್ಯುದ್ದೀಪಾಲಂಕಾರದಲ್ಲಿ ಕಂಗೊಳಿಸಿದ ವಿಧಾನಸೌಧ, ಮೈಸೂರು ಅರಮನೆ!
- ನೇಪಾಳ ಪ್ರವಾಹದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ: 54 ಮಂದಿ ತಾಯ್ನಾಡಿಗೆ ಸುರಕ್ಷಿತ ವಾಪಸ್, ಆತಂಕ ಬೇಡ ಎಂದ ಸಿಎಂ ಡಿ.ಕೆ. ಶಿವಕುಮಾರ್!
- ಚಾರಣಿಗರ ಸುರಕ್ಷತೆಗೆ ಅರಣ್ಯ ಇಲಾಖೆ ಹೊಸ ಎಸ್ಒಪಿ: ರಾಜ್ಯದ 39 ಚಾರಣ ಮಾರ್ಗಗಳಲ್ಲಿ ಇನ್ನುಮುಂದೆ ಕಟ್ಟುನಿಟ್ಟಿನ ನಿಯಮ!
- ಅಮೆರಿಕ ಪ್ರವಾಸದ ಬಳಿಕ ದೇಶವೇ ಅಲ್ಲೋಲ ಕಲ್ಲೋಲ ಆಗುವ ದಾಖಲೆ ಬಿಡುಗಡೆ: ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್!

