ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ವಿವಿಧ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ, ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ನವೆಂಬರ್ 22 (ಭಾನುವಾರ) ಮತ್ತು ನವೆಂಬರ್ 23 (ಸೋಮವಾರ) ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ (BESCOM) ಪ್ರಕಟಣೆಯಲ್ಲಿ ಕೋರಿದೆ.
ಭಾನುವಾರ (ನ. 22) ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
66/11 ಕೆ.ವಿ ಪ್ಲಾಟಿನಂ ಸಿಟಿ ಉಪಕೇಂದ್ರ (ಪೀಣ್ಯ ವಿಭಾಗ – ಎನ್-4, ಎನ್-5, ಎನ್-7 ಉಪವಿಭಾಗ)
ಸಮಯ: ಬೆಳಗ್ಗೆ 10:00 ರಿಂದ ಸಂಜೆ 4:00 ಗಂಟೆಯವರೆಗೆ.
ಪ್ರದೇಶಗಳು: ರಿಲಯನ್ಸ್ ಇಂಡಸ್ಟ್ರೀಸ್, ಕರ್ಲೋನ್ (Kurlon), ಸಿಕ್ಯೂಎಇ (CQAE), ಅಲಿಸ್ಡಾ, ಜೈಭಾರತ್ ಇಂಡಸ್ಟ್ರೀಸ್ ಏರಿಯಾ, ಟಾಟಾ ಅಕೆವಲ್, ಕಾರ್ಲೆ, ಪ್ರೊಫೆಷನಲ್-ಕ್ಲೋಥಿಂಗ್, ರಾಘವೇಂದ್ರ ಲೇಔಟ್, ಆರ್ಎನ್ಎಸ್ ಮೋಟಾರ್, ಮುನೇಶ್ವರ ನಗರ (1ನೇ ಬ್ಲಾಕ್), ವೈಷ್ಣವಿ ನಕ್ಷತ್ರ ಅಪಾರ್ಟ್ಮೆಂಟ್, ಲೆಫ್ಟಿನೆಂಟ್ ಕಾರ್ಲೆ, ಪೀಣ್ಯ ಹನುಮಾನ್ ಫ್ಯಾಕ್ಟರಿ ರಸ್ತೆ, ಆರ್ಟಿಒ ಟ್ರ್ಯಾಕ್ ರಸ್ತೆ, ಎಚ್ಎಂಟಿ (HMT) ರಸ್ತೆ, ಪ್ಲಾಟಿನಂ ಸಿಟಿ ಅಪಾರ್ಟ್ಮೆಂಟ್, ಬಿಎಫ್ಡಬ್ಲ್ಯೂ (BFW), ಎನ್ಟಿಆರ್ಒ (NTRO), ಜಲ ಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಸೋಮವಾರ (ನ. 23) ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
1. 66/11 ಕೆ.ವಿ ಪಾಟರಿ ರಸ್ತೆ ಉಪಕೇಂದ್ರ
ಸಮಯ: ಬೆಳಗ್ಗೆ 9:00 ರಿಂದ ಸಂಜೆ 7:30 ಗಂಟೆಯವರೆಗೆ.
ಪ್ರದೇಶಗಳು: ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಡೇವಿಸ್ ರಸ್ತೆ, ಮಸೀದಿ ರಸ್ತೆ, ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಲಿಂಗರಾಜಪುರಂ, ಹಲಸೂರು, ಜೀವನಹಳ್ಳಿ, ಆರ್.ಕೆ. ರಸ್ತೆ, ಕೋಲ್ಸ್ ರಸ್ತೆ, ಟ್ಯಾನರಿ ರಸ್ತೆ, ಐಟಿಸಿ (ITC) ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
2. 66/11 ಕೆ.ವಿ ನಂದಿನಿ ಲೇಔಟ್ ಉಪಕೇಂದ್ರ
ಸಮಯ: ಬೆಳಗ್ಗೆ 10:00 ರಿಂದ ಸಂಜೆ 4:00 ಗಂಟೆಯವರೆಗೆ.
ಪ್ರದೇಶಗಳು: ಸುಬ್ರಹ್ಮಣ್ಯನಗರ, ಎ, ಬಿ, ಸಿ ಮತ್ತು ಡಿ ಬ್ಲಾಕ್ (ಮಿಲ್ಕ್ ಕಾಲೋನಿ), ಗಾಯತ್ರಿ ನಗರ, ಕೃಷ್ಣಾನಂದ ನಗರ, ಆರ್ಎಂಸಿ ಯಾರ್ಡ್, ಮಾರಪ್ಪನಪಾಳ್ಯ, ಯಶವಂತಪುರ ಕೈಗಾರಿಕಾ ಪ್ರದೇಶ, ಟೆಲಿಫೋನ್ ಎಕ್ಸ್ಚೇಂಜ್, ಶಂಕರನಗರ, ಶ್ರೀಕಂಠೇಶ್ವರ ನಗರ, ಸೋಮೇಶ್ವರ ನಗರ, ಎಪಿಎಂಸಿ ಯಾರ್ಡ್, ಮಹಾಲಕ್ಷ್ಮಿ ಲೇಔಟ್, ಗಣೇಶ ಬ್ಲಾಕ್, ಆಂಜನೇಯ ದೇವಸ್ಥಾನ ರಸ್ತೆ, ಸರಸ್ವತಿಪುರಂ, ಎಜಿಬಿ ಲೇಔಟ್, ಪರಿಮಳ ನಗರ, ಶ್ರೀನಿವಾಸ ನಗರ, ಜೈಮಾರುತಿ ನಗರ, ರವಿ ಬಡಾವಣೆ, ಸಾಕಮ್ಮ ಬಡಾವಣೆ, ಬಿಎಚ್ಇಎಲ್ ಲೇಔಟ್, ಜೆ.ಎಸ್. ನಗರ, ಜೆ.ಸಿ. ನಗರ (9 ರಿಂದ 15ನೇ ಮುಖ್ಯ ರಸ್ತೆ ಹಾಗೂ 1ನೇ ಮುಖ್ಯ ರಸ್ತೆ), ಕುರುಬರಹಳ್ಳಿ, 60 ಅಡಿ ರಸ್ತೆ, ಪಿಡಬ್ಲ್ಯೂಡಿ ಮತ್ತು ಇಡಬ್ಲ್ಯೂಎಸ್ ಕ್ವಾರ್ಟರ್ಸ್, ಡಾ. ರಾಜ್ಕುಮಾರ್ ಸಮಾಧಿ ರಸ್ತೆ, ಗೆಳೆಯರ ಬಳಗ ವೃತ್ತ, ಶ್ರೀರಾಮನಗರ, ಮುನೇಶ್ವರ ಬ್ಲಾಕ್, ಸತ್ಯನಾರಾಯಣ ಲೇಔಟ್, ಮೈಕೋ ಲೇಔಟ್, ಹ್ಯಾಪಿ ಹೋಮ್ಸ್, ಸತ್ವ ಸುತ್ತಮುತ್ತಲಿನ ಪ್ರದೇಶಗಳು.
3. ಸಾರಕ್ಕಿ ಮತ್ತು ಆಡುಗೋಡಿ ಉಪಕೇಂದ್ರ
ಸಮಯ: ಬೆಳಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ.
ಪ್ರದೇಶಗಳು: ಶಾಕಂಬರಿ ನಗರ, ಪೈಪ್ಲೈನ್ ರಸ್ತೆ, ರಾಘವೇಂದ್ರ ಸ್ವಾಮಿ ಮಠ, ಜೆ.ಪಿ. ನಗರ 1, 2, 3, 4, 5 ಮತ್ತು 6ನೇ ಹಂತ, ಪುಟ್ಟೇನಹಳ್ಳಿ, ಸಲಾರ್ಪುರಿಯಾ ಮತ್ತು ನಾಗಾರ್ಜುನ ಅಪಾರ್ಟ್ಮೆಂಟ್, ಜಯನಗರ 5, 7 ಮತ್ತು 8ನೇ ಬ್ಲಾಕ್, ಐಟಿಐ ಲೇಔಟ್, ಎಸ್ಬಿಐ ಕಾಲೋನಿ, ಆರ್.ವಿ. ಡೆಂಟಲ್ ಕಾಲೇಜು ಸುತ್ತಮುತ್ತ, ಎಲ್ಐಸಿ ಕಾಲೋನಿ, ಕೆ.ಆರ್. ಲೇಔಟ್, ವೆಂಕಟಾದ್ರಿ ಲೇಔಟ್, ಸಾಯಿ ನರ್ಸರಿ ರಸ್ತೆ, ಆದರ್ಶ ರೆಸಿಡೆನ್ಸಿ, ಸಿಂಧೂರ ಕನ್ವೆನ್ಷನ್ ಹಾಲ್, ಜೆ.ಪಿ. ನಗರ ಮೆಟ್ರೋ ಸುತ್ತಮುತ್ತ, ಇಂದಿರಾಗಾಂಧಿ ವೃತ್ತ, ಆಸ್ಟರ್ ಆಸ್ಪತ್ರೆ, ನಟ ಸುದೀಪ್ ಮನೆ ಸುತ್ತಮುತ್ತಲಿನ ಪ್ರದೇಶ, ಗ್ರೀನ್ ಸಿಟಿ ಆಸ್ಪತ್ರೆ, ಸೆಂಟ್ರಲ್ ಮಾಲ್, ಕಲ್ಯಾಣಿ ಮ್ಯಾಗ್ನಮ್, ಡಿ.ಎಸ್. ಪಾಳ್ಯ, ಮಾರೇನಹಳ್ಳಿ, ಮಂಜುನಾಥ ಕಾಲೋನಿ, ಟ್ಯಾಂಕ್ ಬಂಡ್ ರಸ್ತೆ, ಬನ್ನೇರುಘಟ್ಟ ರಸ್ತೆ, ಡಾಲರ್ಸ್ ಲೇಔಟ್.
ಆಡುಗೋಡಿ ವ್ಯಾಪ್ತಿ: ಸಲಾರ್ಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆಎಂಎಫ್ ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮಿ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಬೆಂಗಳೂರು ಡೈರಿ, ಫೋರಂ ಮಾಲ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯನಪಾಳ್ಯ, ಚಂದ್ರಪ್ಪ ನಗರ, ನಿಮ್ಹಾನ್ಸ್ ಆಡಳಿತ ವಿಭಾಗ, ಬಂಡೆ ಸ್ಲಮ್, ಸುಣ್ಣದಕಲ್ಲು, ಬೃಂದಾವನ ಸ್ಲಮ್, ಲಾಲ್ಜಿ ನಗರ, ಶಾಮಣ್ಣ ಗಾರ್ಡನ್, ಎನ್ಡಿಆರ್ಐ ಮತ್ತು ಪೊಲೀಸ್ ವಸತಿ ಗೃಹಗಳು.

