Thu. Dec 26th, 2024

ವಿಪ್ರ ವಕೀಲರ‌ ಪರಿಷತ್ ನಿಂದ ಆಚಾರ್ಯತ್ರಯರ ಜಯಂತಿ ಆಚರಣೆ

Share this with Friends

ಮೈಸೂರು,ಮೇ.15: ವಿಪ್ರ ವಕೀಲರ ಪರಿಷತ್ ವತಿಯಿಂದ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರ ಜಯಂತಿ ಹಮ್ಮಿಕೊಳ್ಳಲಾಯಿತು.

ಕೃಷ್ಣಮೂರ್ತಿ ಪುರಂನಲ್ಲಿನ ರಾಮಮಂದಿರದಲ್ಲಿ ಆಯೋಜಿಸಿದ್ದ ಮೂವರು ಆಚಾರ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಅವಧೂತ ದತ್ತ ಪೀಠದ ದತ್ತ ವಿಜಯಾನಂದ ತೀರ್ಥ ಶ್ರೀಗಳು ಆಡಿಯೋ ಮೂಲಕ ಸಂದೇಶ ನೀಡಿದರು.

ಮೂವರು ಆಚಾರ್ಯರ ಜಯಂತಿಯನ್ನು ಒಟ್ಟಿಗೆ ಆಚರಿಸುತ್ತಿರುವುದು ನಾಡಿಗೆ ಒಳ್ಳೆಯ ಸಂದೇಶ ನೀಡಿದಂತಾಗಿದೆ ಎಂದು ಹೇಳಿದರು.

ಆಚಾರ್ಯರ ವ್ಯಕ್ತಿತ್ವ ಈಗ ಭಾರತದಲ್ಲಿ ಮಾತ್ರ ಅಲ್ಲ,ವಿದೇಶದಲ್ಲೂ ಪಸರಿಸಿ,
ಆಚಾರ್ಯತ್ರಯರಿಗೆ ವಿಶೇಷ ಗೌರವ ನೀಡಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

ನಂತರ ಸೋಸಲೆ ವ್ಯಾಸರಾಜ ಮಠದ ಪೀಠಾದಿಪತಿ ವಿದ್ಯಾತೀರ್ಥ ಸ್ವಾಮಿಗಳು ಮಾತನಾಡಿ,ಶಂಕರಾಚಾರ್ಯ ,ಮಧ್ವಾಚಾರ್ಯರು ಹಾಗು ರಾಮಾನುಜಾಚಾರ್ಯರ ಸಿದ್ಧಾಂತ ಒಂದೇ ಆಗಿದೆ. ಜನರಿಗೆ ಒಳಿತು ಮಾಡುವುದೇ ಈ‌ ಮೂವರ ಸಿದ್ದಾಂತದ ಉದ್ದೇಶವಾಗಿತ್ತು ಎಂದು
ಹೇಳಿದರು.

ಮೇಲುಕೋಟೆಯ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಬ್ರಾಹ್ಮಣರು ಒಟ್ಟಾಗಿ ಸಮಾಜದ ಕೆಡುಕುಗಳ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್ ಸೇರಿದಂತೆ ಪರಿಷತ್ ನ ಹಿರಿಯ ವಿಪ್ರ
ಸದಸ್ಯರಿಗೆ ಸನ್ಮಾನ ಮಾಡಲಾಯಿತು.


Share this with Friends

Related Post