ಬೆಂಗಳೂರು: ಮುಂಬರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಚುನಾವಣಾ ತಂತ್ರಗಾರಿಕೆಗಾಗಿ ಉಸ್ತುವಾರಿಗಳ ಬೃಹತ್ ಪಡೆಯನ್ನೇ ಘೋಷಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಐದು ಪ್ರಾಧಿಕಾರಗಳು ಹಾಗೂ ವಿಧಾನಸಭಾ ಕ್ಷೇತ್ರಗಳ ನಿರ್ವಹಣೆಗಾಗಿ ಪ್ರಮುಖ ನಾಯಕರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.
ಜಿಬಿಎ ರಾಜ್ಯ ತಂಡ:
ಚುನಾವಣಾ ಕಾರ್ಯಾಚರಣೆಯ ಉನ್ನತ ಮಟ್ಟದ ಉಸ್ತುವಾರಿಗಾಗಿ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ಹಿರಿಯ ನಾಯಕರಾದ ಎಸ್. ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವತ್ ನಾರಾಯಣ ಸೇರಿದಂತೆ ಒಟ್ಟು 12 ಪ್ರಮುಖರ ತಂಡವನ್ನು ರಚಿಸಲಾಗಿದೆ.
ಪ್ರಾಧಿಕಾರವಾರು ಜವಾಬ್ದಾರಿ:
ಬೆಂಗಳೂರು ಪೂರ್ವ ಪ್ರಾಧಿಕಾರ: ರಾಜ್ಯ ಉಪಾಧ್ಯಕ್ಷರಾದ ಬೈರತಿ ಬಸವರಾಜ್, ಮಂಜುಳಾ ಅರವಿಂದ ಲಿಂಬಾವಳಿ, ಎನ್. ರವಿಕುಮಾರ್ ಹಾಗೂ ಎನ್.ಎಸ್. ನಂದೀಶ್ ರೆಡ್ಡಿ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ.
ಬೆಂಗಳೂರು ಉತ್ತರ ಪ್ರಾಧಿಕಾರ: ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು ದಾಸರಹಳ್ಳಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಭಾರತಿ ಶೆಟ್ಟಿ ಮತ್ತು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ನಿಯೋಜಿಸಲಾಗಿದೆ.
ಬೆಂಗಳೂರು ಪಶ್ಚಿಮ ಪ್ರಾಧಿಕಾರ: ಈ ವಿಭಾಗಕ್ಕೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಶಾಸಕರಾದ ಎಸ್. ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವತ್ ನಾರಾಯಣ್, ಗೋಪಾಲಯ್ಯ, ಮುನಿರತ್ನ, ರವಿ ಸುಬ್ರಮಣ್ಯ, ಮುನಿರಾಜು ದಾಸರಹಳ್ಳಿ ಹಾಗೂ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಸೇರಿದಂತೆ 10 ಪ್ರಮುಖರ ತಂಡವನ್ನು ನೇಮಿಸಲಾಗಿದೆ.
ಬೆಂಗಳೂರು ದಕ್ಷಿಣ ಪ್ರಾಧಿಕಾರ: ಶಾಸಕರಾದ ಸತೀಶ್ ರೆಡ್ಡಿ, ಎಂ. ಕೃಷ್ಣಪ್ಪ, ಸಿ.ಕೆ. ರಾಮಮೂರ್ತಿ ಹಾಗೂ ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತೆ ಪೂರ್ಣಿಮಾ ಪ್ರಕಾಶ್ ಅವರಿಗೆ ಇಲ್ಲಿನ ಜವಾಬ್ದಾರಿ ನೀಡಲಾಗಿದೆ.
ಬೆಂಗಳೂರು ಕೇಂದ್ರ ಪ್ರಾಧಿಕಾರ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ಎಸ್. ರಘು, ಉದಯ್ ಬಿ. ಗರುಡಾಚಾರ್, ಸಿ.ಕೆ. ರಾಮಮೂರ್ತಿ, ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಮತ್ತು ಸರೋಜಿನಿ ಭಾರದ್ವಾಜ್ ಅವರಿಗೆ ಈ ಭಾಗದ ಉಸ್ತುವಾರಿ ವಹಿಸಲಾಗಿದೆ.
ವಿಧಾನಸಭಾ ಕ್ಷೇತ್ರಗಳ ಪ್ರಮುಖ ಉಸ್ತುವಾರಿಗಳು:
ವಿಧಾನಸಭಾ ಕ್ಷೇತ್ರವಾರು ಚುನಾವಣಾ ಉಸ್ತುವಾರಿಯನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:
ಯಲಹಂಕ: ಎಸ್.ಆರ್. ವಿಶ್ವನಾಥ್
ಕೆ.ಆರ್. ಪುರಂ: ಬೈರತಿ ಬಸವರಾಜ್
ರಾಜರಾಜೇಶ್ವರಿ ನಗರ: ಮುನಿರತ್ನ
ದಾಸರಹಳ್ಳಿ: ಎಸ್. ಮುನಿರಾಜು
ಮಹಾಲಕ್ಷ್ಮಿ ಲೇಔಟ್: ಗೋಪಾಲಯ್ಯ
ಮಲ್ಲೇಶ್ವರಂ: ಡಾ. ಸಿ.ಎನ್. ಅಶ್ವತ್ ನಾರಾಯಣ್
ಸಿ.ವಿ. ರಾಮನ್ ನಗರ: ಎಸ್. ರಘು
ರಾಜಾಜಿನಗರ: ಎಸ್. ಸುರೇಶ್ ಕುಮಾರ್
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಈ ನಡೆಯು ಮುಂಬರುವ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಹಿಡಿತವನ್ನು ಸಾಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗಿದೆ.

