ಮೈಸೂರು, ಜು.6: ರೈತರು ಬೆಳೆಗೆ ಕಾವೇರಿ ನೀರನ್ನು ಕೂಡಲೇ ಹರಿಸಬೇಕು, ಅಗತ್ಯ ಗೊಬ್ಬರ, ಬೀಜಗಳನ್ನು ಉಚಿತವಾಗಿ ವಿತರಿಸಿ ಪ್ರೋತ್ಸಾಹಿಸಬೇಕೆಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ (ಜೆ.ಪಿ) ಒತ್ತಾಯಿಸಿದ್ದಾರೆ.
ದೊಡ್ಡ ಗಡಿಯಾರದ ಮುಂಭಾಗ ಕಾವೇರಿ ಕ್ರಿಯಾ ಸಮಿತಿಯ ಆಶ್ರಯದಲ್ಲಿ ಇಂದು ನಡೆದ ಧರಣಿ ಸತ್ಯಾಗ್ರಹದ ಹಾಗೂ ಸಹಿಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡ್ಯಾಮ್ ಗಳಲ್ಲಿ ಶೇಖರಿಸಿಟ್ಟ ನೀರನ್ನು ತಮಿಳುನಾಡಿಗೆ ಬಿಟ್ಟು ನಮ್ಮ ರೈತರಿಗೆ ದ್ರೋಹ ಬಗೆದಂತಾಗಿದೆ ಎಂದು ಆರೋಪಿಸಿದರು.
ಮುಡಾದಲ್ಲಿರುವ ರೈತನ ಸಮಸ್ಯೆಗಳನ್ನು ಬಗೆಹರಿಸಿದರೆ ಈ ರೀತಿ ಹಗರಣ ನಡೆಯುತ್ತಿರಲಿಲ್ಲ ಎಂದು ಎಸ್.ಜಯಪ್ರಕಾಶ್ ಅಭಿಪ್ರಾಯ ಪಟ್ಟರು.
ಧರಣಿಯಲ್ಲಿ ಮೂಗೂರು ನಂಜುಂಡಸ್ವಾಮಿ, ಹೆಚ್.ಕೆ.ರಾಮು, ಭಾಗ್ಯಮ್ಮ, ದೇವಿ, ಸುರೇಶ್ ಗೌಡ, ವರಕೊಡು ಕೃಷ್ಣಗೌಡ, ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ ಮತ್ತಿತರರು ಮಾತನಾಡಿದರು.
ಸಿಂಧುವಳ್ಳಿ ಶಿವಕುಮಾರ್. ಎಸ್.ಎ.ಶ್ರೀನಿವಾಸ್, ಪ್ರಭುಶಂಕರ್, ಚಂದ್ರಶೇಖರ ರಾಜೇ ಅರಸ್, ಶಿವರಾಂ, ಶಾಂತಕುಮಾರಿ, ಎಂ.ಹೆಚ್.ಹನುಮಂತಯ್ಯ ನೇಹ, ಜಿ.ನಾಗರಾಜು, ಕೆ.ಮಹೇಶ್ ಗೌಡ, ಸುಮಂತ್ .ವಿ.ಪಿ., ಸಂಜಯ್, ವಿಷ್ಣು ಮತ್ತಿತರರು ಭಾಗವಹಿಸಿದ್ದರು.