ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ತನ್ನ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಬದಲಾಯಿಸಿದ್ದು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ಸುಲಭ ಬಳಕೆಗೆ ಅನುಕೂಲವಾಗುವಂತೆ ನೂತನ ವೆಬ್‌ಸೈಟ್ ಪೋರ್ಟಲ್ ಅನ್ನು ಅಧಿಕೃತವಾಗಿ ಚಾಲ್ತಿಗೆ ತಂದಿದೆ.
ಹೊಸ ವೆಬ್‌ಸೈಟ್ ಲಿಂಕ್:
ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಆಯೋಗವು ಈ ಪ್ರಮುಖ ಬದಲಾವಣೆಯನ್ನು ಮಾಡಿದೆ. ಈ ಹಿಂದೆ ಬಳಕೆಯಲ್ಲಿದ್ದ ಹಳೆಯ ವೆಬ್‌ಸೈಟ್ ವಿಳಾಸ https://kpsc.kar.nic.in ಬದಲಿಗೆ, ಇನ್ಮುಂದೆ ಹೊಸದಾದ https://kpsc.karnataka.gov.in ವೆಬ್‌ಸೈಟ್ ವಿಳಾಸವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.
ಆಯೋಗದ ಸ್ಪಷ್ಟನೆ:
ಇನ್ಮುಂದೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ಎಲ್ಲಾ ಹೊಸ ನೇಮಕಾತಿ ಅಧಿಕೃತ ಅಧಿಸೂಚನೆಗಳು, ಪರೀಕ್ಷಾ ಪ್ರವೇಶ ಪತ್ರಗಳು, ಫಲಿತಾಂಶಗಳು ಹಾಗೂ ಅಭ್ಯರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳನ್ನು ಪಡೆಯಲು ನೂತನ ವೆಬ್‌ಸೈಟ್ https://kpsc.karnataka.gov.in ಅನ್ನು ಮಾತ್ರ ವೀಕ್ಷಿಸಬೇಕು. ಅಭ್ಯರ್ಥಿಗಳು ಯಾವುದೇ ರೀತಿಯ ನಕಲಿ ವೆಬ್‌ಸೈಟ್‌ಗಳಿಗೆ ಮರುಳಾಗಬಾರದು ಎಂದು ಆಯೋಗದ ಕಾರ್ಯದರ್ಶಿಯವರಾದ ಜ್ಯೋತಿ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

