Sat. Jun 6th, 2026

ಸಂಘಟನೆ ಶಕ್ತಿಯಿಂದ ಪಕ್ಷ ಬಲಪಡಿಸಿ ಜನರ ಸೇವೆ ಮಾಡೋಣ: ಮಾಜಿ ಶಾಸಕ ಶ್ರೀಮಂತ ‌ಪಾಟೀಲ

Share this with Friends

ಕಾಗವಾಡ: ನಿರಂತರ ಪ್ರಯತ್ನದಿಂದ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ ನಮ್ಮ ಎಲ್ಲ ಹಿರಿಯ ನಾಯಕರನ್ನು ಸ್ಮರಿಸುವ ದಿನವನ್ನು ಬಿಜೆಪಿ ಸ್ಥಾಪನಾ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಶ್ರೀಮಂತ ಹೇಳಿದರು.

ಸೋಮವಾರ ಸಂಜೆ ಕಾಗವಾಡ ತಾಲೂಕಿನ. ಕೆಂಪವಾಡದ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಕೇಂದ್ರ ಕಛೇರಿಯಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಂಕಲ್ಪ, ಸೇವೆ ಮತ್ತು ಸಮರ್ಪಣೆ ಹಾಗೂ ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸವಿದ್ದು ಶುಭ ಸಂದರ್ಭದಲ್ಲಿ ಸಂಘಟನೆಯ ಶಕ್ತಿಯನ್ನು ಮತ್ತಷ್ಟು ಬಲಪಡಿಸಿ, ಜನಸೇವೆಗಾಗಿ ನಿಷ್ಠೆಯಿಂದ ಮುಂದುವರೆಯುವ ಸಂಕಲ್ಪ ಮಾಡೋಣ ಎಂದರು

ಈ ಸಮಯದಲ್ಲಿ ಬಿಜೆಪಿ ಕಾಗವಾಡ ಮಂಡಲ ಅಧ್ಯಕ್ಷರಾದ ಅರುಣಕುಮಾರ ಗಣೇಶವಾಡಿ, ಮುಖಂಡರಾದ ಕಿರಣ ಯಂದಗೌಡರ, ಸುಭಾಸ ಮಾಳಿ, ಬಾಬು ಹೊಸಮನಿ, ಶ್ರೀ ರಮೇಶ ಘೋಡಸೆ, ಶಿವಾನಂದ ಮುಜಗೋನವರ ಸೇರಿದಂತೆ ಹಲವಾರು ಗಣ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share this with Friends

Related Post