Thu. Nov 19th, 2026

ಪೊಲೀಸ್ ಮತ್ತು ಮಾಧ್ಯಮ – ಪರಸ್ಪರ ಸಹಕಾರದಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯ: ಐಜಿಪಿ ಸಂದೀಪ ಪಾಟೀಲ

Share this with Friends

ವರದಿ: ವಿಕಿಲ‌ ಎಸ್. ಹಿರೇಮಠ

ಬೆಳಗಾವಿ: ಪೊಲೀಸ್ ಇಲಾಖೆ ಹಾಗೂ ಮಾಧ್ಯಮ ಕ್ಷೇತ್ರದ ಕಾರ್ಯವೈಖರಿಯಲ್ಲಿ ಸಾಕಷ್ಟು ಸಾಮ್ಯತೆಗಳಿದ್ದು, ಎರಡೂ ಕ್ಷೇತ್ರಗಳು ಯಾವುದೇ ಸಮಯದಲ್ಲಾದರೂ ಕರ್ತವ್ಯ ನಿರ್ವಹಿಸಲು ಸಿದ್ಧವಾಗಿರುವ ಜೊತೆಗೆ ಪರಸ್ಪರ ಸಹಕಾರ ಹಾಗೂ ಸಮನ್ವಯದಿಂದ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಹೇಳಿದರು.

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ಒಂದು ಸಮಸ್ಯೆ ಎದುರಾದರೂ ಅದನ್ನು ಎಲ್ಲರ ಸಹಕಾರದೊಂದಿಗೆ ಪರಿಹರಿಸುವ ಅವಕಾಶ ಈ ಜಿಲ್ಲೆಯಲ್ಲಿ ನಮಗೆ ದೊರೆತಿದೆ ಪತ್ರಿಕೋದ್ಯಮವನ್ನು ಬಹಳಷ್ಟು ಸಂದರ್ಭಗಳಲ್ಲಿ ‘ಥ್ಯಾಂಕ್‌ಲೆಸ್ ಜಾಬ್’ ಎಂದು ಕರೆಯಲಾಗುತ್ತದೆ.

ಅದೇ ರೀತಿ ಪೊಲೀಸ್ ಇಲಾಖೆಯ ಕೆಲಸವೂ ಹಲವು ಬಾರಿ ಮೆಚ್ಚುಗೆಗೆ ಪಾತ್ರವಾಗದ ಸವಾಲಿನ ವೃತ್ತಿಯಾಗಿದೆ. ಯಾವುದಾದರೂ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣವೇ ಸ್ಥಳಕ್ಕೆ ತೆರಳಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪೊಲೀಸ್ ಸಿಬ್ಬಂದಿಯಂತೆ ಪತ್ರಕರ್ತರು ಯಾವುದೇ ಸಮಯದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಾಗಿರಬೇಕು. ಹಬ್ಬ, ರಜೆ ಅಥವಾ ಭಾನುವಾರ ಎಂಬ ಭೇದವಿಲ್ಲದೆ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯುವ ಸಂದರ್ಭದಲ್ಲಿಯೂ ಯಾವಾಗ ಕರ್ತವ್ಯದ ಕರೆ ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಎರಡೂ ಕ್ಷೇತ್ರಗಳ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಮ್ಯತೆಗಳಿವೆ ಎಂದರು.

ಆ

ಕಾರ್ಯಕ್ರಮದಲ್ಲಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಪೊಲೀಸದ ಕಮಿಷನರ್ ಪ್ರಕಾಶ ನಿಕ್ಕಂ,‌ಎಸ್ಪಿ ಕೆ. ರಾಮರಾಜನ, ವಿಲಾಸ ಜೋಶಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.


Share this with Friends

Related Post