Fri. Mar 6th, 2026

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಳೆ ಹಳದಿ ಮಾರ್ಗಕ್ಕೆ 6ನೇ ರೈಲು ಸೇರ್ಪಡೆ

Share this with Friends

ಬೆಂಗಳೂರು: ಹಳದಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರೊಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದ್ದು, ನಾಳೆಯಿಂದ ಮತ್ತೊಂದು ರೈಲು ಹೆಚ್ಚುವರಿಯಾಗಿ ಹೊಸದಾಗಿ ಸೇರ್ಪಡೆಯಾಗುತ್ತಿದೆ ಹಾಗಾಗಿ ಇನ್ಮುಂದೆ 13 ನಿಮಿಷಕ್ಕೊಂದು ರೈಲು ಹಳದಿ ಮಾರ್ಗದಲ್ಲಿ ಸಂಚರಿಸಲಿದೆ.

ಹಳದಿ ಮಾರ್ಗದಲ್ಲಿ 6ನೇ ಮೆಟ್ರೋ ರೈಲನ್ನು 23ನೇ ಡಿಸೆಂಬರ್ 2025ರಿಂದ (ಮಂಗಳವಾರ) ಪ್ರಯಾಣಿಕರ ಸೇವೆಗೆ ಪ್ರಾರಂಭಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.ಈ ರೈಲಿನ ಸೇರ್ಪಡೆಯೊಂದಿಗೆ, ಸೋಮವಾರದಿಂದ ಶನಿವಾರದವರೆಗೆ ಜನದಟ್ಟನೆಯ ಅವಧಿಯಲ್ಲಿ ಮೆಟ್ರೋ ಸೇವೆಗಳು ಪ್ರಸ್ತುತ ಇರುವ 15 ನಿಮಿಷಗಳ ಅಂತರದ ಬದಲು 13 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿವೆ. ಭಾನುವಾರಗಳಂದು ಪೀಕ್ ಅವಧಿಯ ಸೇವಾ ಅವಧಿ 15 ನಿಮಿಷಗಳಾಗಿಯೇ ಮುಂದುವರಿಯಲಿದೆ.

ಆ‌ರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಿಂದ ಮೊದಲ ಹಾಗೂ ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ, ಮೆಟ್ರೋ ಸೇವೆಗಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.


Share this with Friends

Related Post