Fri. Mar 6th, 2026

ಬಡವರ ಉಚಿತ ಕಣ್ಣಿನ ಚಿಕಿತ್ಸೆಗಾಗಿ ನಿಧಿ ಸಂಗ್ರಹ, ಅನ್ವಯ ಫೌಂಡೇಶನ್’ನಿಂದ ಜ.18ರಂದು ಭಾವ ನವನವೀನ ಸಂಗೀತ ಸಂಜೆ ಕಾರ್ಯಕ್ರಮ

Share this with Friends

ಬೆಂಗಳೂರು:ಗುಡ್ಡಗಾಡು ಪ್ರದೇಶಗಳಲ್ಲಿ ಉಚಿತ ನೇತ್ರ ತಪಾಸಣೆ ನಡೆಸಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುತ್ತಿರುವ ಅನ್ವಯ ಫೌಂಡೇಶನ್ ಜನವರಿ 18 ರಂದು ಬಡವರ ಉಚಿತ ಕಣ್ಣಿನ ಚಿಕಿತ್ಸೆಗಾಗಿ ನಿಧಿ ಸಂಗ್ರಹ ಮಾಡಲು ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಅನ್ವಯ ಫೌಂಡೇಷನ್ ಅಧ್ಯಕ್ಷ ನರಸಿಂಹ ಪ್ರಸಾದ್,ಜನವರಿ 18 ರಂದು ದೊಡ್ಡಕಲ್ಲಸಂದ್ರದ ಶಂಕರ ಫೌಂಡೇಷನ್ನಲ್ಲಿ ನಿನಾದ ಸಂಗೀತ ತಂಡದಿಂದ ಭಾವ ನವನವೀನ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಬಡವರ ಉಚಿತ ಕಣ್ಣಿನ ಚಿಕಿತ್ಸೆಗಾಗಿ ನಿಧಿ ಸಂಗ್ರಹ ಮಾಡಲು ಈ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದ ಟಿಕೆಟ್ ಮಾರಾಟದಿಂದ ಬರುವ ಹಣವನ್ನು ಬಡವರ ನೇತ್ರ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತದೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಗೀತ ಕಾರ್ಯಕ್ರಮದ ಟಿಕೆಟ್ ಖರೀದಿಸಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.


Share this with Friends

Related Post