ಬೆಂಗಳೂರು:2025 ರ ವರ್ಷಾಂತ್ಯದ ಡಿಸೆಂಬರ್ ತಿಂಗಳಿನಲ್ಲಿ ಬಿಎಂಟಿಸಿ ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಕಾರ್ಯವನ್ನು ಚುರುಕುಗೊಳಿಸಿ 6.34 ಲಕ್ಷ ರೂ.ಗಳ ದಂಡ ವಸೂಲಿ ಮಾಡಿದೆ.ಆ ಮೂಲಕ ಸಂಸ್ಥೆಗೆ ಆಗುತ್ತಿದ್ದು ನಷ್ಟವನ್ನು ತಪ್ಪಿಸಿದ್ದು ನಿರ್ವಾಹಕರ ವಿರುದ್ಧವೂ ಕೇಸ್ ದಾಖಲಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ಸಂಸ್ಥೆಯ ತನಿಖಾ ತಂಡಗಳು ಡಿಸೆಂಬರ್ ನಲ್ಲಿ ತೀವ್ರ ತಪಾಸಣೆ ಮಾಡಿವೆ. ಒಟ್ಟು 18,409 ಟ್ರಿಪ್ಗಳನ್ನು ತಪಾಸಿಸಿ 2801 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ. 6,34,865/- ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1748 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇನ್ನು ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 250 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 25,000/- ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಿ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ ಡಿಸೆಂಬರ್ -2025 ರ ಮಾಹೆಯಲ್ಲಿ 3051 ಪ್ರಯಾಣಿಕರಿಂದ ಒಟ್ಟು ರೂ 6,59,865/- ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಸಂಸ್ಥೆಯು ಕೋರಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಕೇಂದ್ರ ಕಛೇರಿ: ಕೇಂದ್ರ ತನಿಖಾದಳ ಮಾರ್ಚ್ -2025 ಮಾಹೆಯ ತನಿಖಾ ಕಾರ್ಯ ಸಾಧನೆ ವಿವರಣಾ ಪಟ್ಟಿ
ಕ್ರಮ ಸಂಖ್ಯೆ ವಿವರ ಡಿಸೆಂಬರ್ -2025
1 ತನಿಖೆ ಮಾಡಿದ ಒಟ್ಟು ಬಸ್ಗಳು
18409
2 ಪತ್ತೆಯಾದ ಪ್ರಕರಣಗಳು
ಅ)ಸಾಮಾನ್ಯ ಪ್ರಕರಣಗಳು1654
ಆ)ಕೆಂಪು ಚುಕ್ಕೆ ಪ್ರಕರಣಗಳು68
ಇ)ಗಂಭೀರ ಕೆಂಪುಚುಕ್ಕೆ ಪ್ರಕರಣಗಳು23
ಈ)ವಿಶೇಷ ಪ್ರಕರಣಗಳು01
ಉ) ಖಾಸಗಿ ಬಸ್ ಗಳ ಪ್ರಕರಣಗಳು02
ಒಟ್ಟು1748
3 ಟಿಕೇಟ್ ರಹಿತ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) 6,34,865/-
4 ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) 25,000/-
5 ಒಟ್ಟು ವಸೂಲಾದ ದಂಡದ ಹಣ (ರೂ) 6,59,865/-
6 ದಂಡ ವಿಧಿಸಲಾದ ಟಿಕೇಟ್ ರಹಿತ ಪ್ರಯಾಣಿಕರ ಸಂಖ್ಯೆ 2801
7 ದಂಡ ವಿಧಿಸಲಾದ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರ ಸಂಖ್ಯೆ 250
8 ದಂಡ ವಿಧಿಸಲಾದ ಒಟ್ಟು ಪ್ರಯಾಣಿಕರ ಸಂಖ್ಯೆ 3051

