Fri. Mar 6th, 2026

ಬೆಂಗಳೂರಿನ ಹಲವು ಕಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ: ವಿವರಗಳಿಗೆ ಈ ಸುದ್ದಿ ನೋಡಿ

Share this with Friends

ಬೆಂಗಳೂರು: ಮಹಾನಗರದ ಹಲವು ಬಡಾವಣೆಗಳಲ್ಲಿ ಫೆಬ್ರವರಿ 5 ಮತ್ತು 6 ರಂದು ಎರಡು ದಿನಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಹಾಗಾಗಿ ಅಗತ್ಯ ಸಿದ್ದತೆ ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಜಲಂಮಡಳಿ ಬೆಂಗಳೂರು ನಾಗರಿಕರಿಗೆ ಮನವಿ ಮಾಡಿದೆ.

ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಕುರಿತು ಮಾಹಿತಿ ನೀಡಿದ ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ ಪ್ರಸಾತ್‌ ಮನೋಹರ್‌, ಫೆಬ್ರವರಿ 5 ಮತ್ತು 6 ರಂದು ನಗರದ ಹಲವು ಭಾಗಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಬೆಂಗಳೂರು ಜಲಮಂಡಳಿಯು ಕೈಗೆತ್ತಿಕೊಂಡಿರುವ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು ಅಗತ್ಯ ಸಹಕಾರ ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಕಾಮಗಾರಿಯಿಂದಾಗಿ ನಗರದ ವಿಶಾಲ ಪ್ರದೇಶಗಳಲ್ಲಿ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದ್ದು,ಎರಡು ದಿನ ನೀರು ಪೂರೈಕೆ ವ್ಯತ್ಯಯವಾಗಲಿರುವ ಕಾರಣ ಜನತೆ ನೀರು ಸಂಗ್ರಹ ಮಾಡಿಟ್ಟುಕೊಳ್ಳುವಂತೆ ಮನವಿ ಮಾಡಿದರು.

ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿರುವ ಪ್ರದೇಶಗಳ ವಿವರ ಹೀಗಿದೆ: 

ಮಾಗಡಿ ರಸ್ತೆ, ಕದ್ರೆನಹಳ್ಳಿ, ಮಿನಜ್ ನಗರ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ, ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್ ನಗರ, ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್ ನಗರ, ಪೂರ್ಣ ಪ್ರಜ್ಞಾ ಲೇಔಟ್, ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ, ಎ.ಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ, ಕೆನರಾ ಬ್ಯಾಂಕ್ ಕಾಲೋನಿ, ಕಾಕತೀಯ ನಗರ, ಸುದಗುಂಟ ಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್‌, ವೆಂಟೇಶ್ವರ ಲೇಔಟ್‌, ಬೃಂದಾವನ ಲೇಔಟ್‌, ಮಡಿವಾಳ, ಚಿನ್ನಮ್ಮ ಲೇಔಟ್‌, ಕೋರಮಂಗಲ 2, 4, 5, 6, 7 ಮತ್ತು 8ನೇ ಬ್ಲಾಕ್‌, ಚಿಕ್ಕಆಡುಗೋಡಿ, ಸೆಂಟ್‌ ಜಾನ್‌ ಆಸ್ಪತ್ರೆ, ರಾಜೇಂದ್ರ ನಗರ, ಆಡುಗೋಡಿ, ಜಾನ್ಸ್‌ನ್‌ ಮಾರ್ಕೆಟ್‌, ಸಿಎಲ್‌ಆರ್‌, ಶಾಂತಿನಗರ, ಲಾಗ್‌ ಪೋರ್ಡ್‌ ಟೌನ್‌, ಎಂ.ಜಿ ರಸ್ತೆ, ರಿಚ್‌ಮಂಡ್‌ ಟೌನ್‌, ನೀಲಸಂದ್ರ, ಅಶೋಕ್‌ ನಗರ, ಆಸ್ಟಿನ್‌ ಟೌನ್‌, ವಿವೇಕ್‌ ನಗರ, ಈಜಿಪುರ, ದೊಮ್ಮಲೂರು ಲೇಔಟ್‌, ದೊಮ್ಮಲೂರು ವಿಲೇಜ್‌, ಕೋಡಿಹಳ್ಳಿ, ಕಮಾಂಡೋ ಆಸ್ಪತ್ರೆ, ಜೋಗಿಪಾಳ್ಯ, ಕೇಂಬ್ರಿಡ್ಜ್‌ ಲೇಔಟ್‌, ಚಾಮರಾಜಪೇಟೆ, ಶ್ರೀನಗರ, ಬಿಎಸ್ ಕೆ 1ನೇ ಹಂತ, ಅಶೋಕ್‌ ನಗರ ಪೈಪ್‌ ಲೈನ್‌ ರಸ್ತೆ, ಜಯನಗರ 4ನೇ ಮತ್ತು ‘ಟಿ’ ಬ್ಲಾಕ್‌, ತಿಲಕ್‌ ನಗರ, ಮಾಧವನ ಪಾರ್ಕ್‌, ಹೊಂಬೇಗೌಡ ನಗರ, ಲಕ್ಕಸಂದ್ರ, ಶಾಂತಿನಗರ ಲೇಔಟ್‌, ಜೆಕೆಪುರ, ಅಕ್ಕಿತಿಮ್ಮನ ಹಳ್ಳಿ, ಜಗಜೀವನರಾಮನಗರ, ರುದ್ರಪ್ಪ ಗಾರ್ಡನ್‌, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಸುಧಾಮನಗರ, ಬನಗಿರಿ, ಜಯನಗರ 6, 7 ಮತ್ತು 8ನೇ ಬ್ಲಾಕ್‌, ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೋನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್‌, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆಪಿನಗರ 1, 2 ಮತ್ತು 3ನೇ ಹಂತ, ಮಾರೇನಹಳ್ಳಿ, ಜಯನಗರ 5 ಮತ್ತು 9ನೇ ಬ್ಲಾಕ್‌, ಭೈರಸಂದ್ರ, ಎಲ್‌ ಐ ಸಿ ಕಾಲೋನಿ, ಸಿದ್ದಾಪುರ, ವಿಲ್ಸ್‌ನ್‌ ಗಾರ್ಡನ್ ಹಾಗೂ ನಿಮಾನ್ಸ್‌ ಆಸ್ಪತ್ರೆ ಸುತ್ತಮುತ್ತಲಿನ ನಿವಾಸಿಗಳು ಈ ವ್ಯತ್ಯಯವನ್ನು ಗಮನಿಸಬೇಕೆಂದು ಕೋರಲಾಗಿದೆ.


Share this with Friends

Related Post