Fri. Mar 6th, 2026

ಕೆಲಸದ ನಡುವೆಯೇ ಉನ್ನತ ಶಿಕ್ಷಣ: KSOU ಜನವರಿ ಆವೃತ್ತಿಯ ಪ್ರವೇಶಾತಿ ಆರಂಭ; ಇಂದೇ ಅರ್ಜಿ ಸಲ್ಲಿಸಿ!

Share this with Friends

ಮೈಸೂರು: ಉದ್ಯೋಗದ ನಡುವೆಯೂ ಉನ್ನತ ಶಿಕ್ಷಣದ ಕನಸು ಕಾಣುವವರಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) 2025-26ನೇ ಸಾಲಿನ ಜನವರಿ ಆವೃತ್ತಿಯ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ನ್ಯಾಕ್ (NAAC) ಸಂಸ್ಥೆಯಿಂದ ‘ಎ+’ ಮಾನ್ಯತೆ ಪಡೆದಿರುವ ವಿವಿಯ ವಿವಿಧ ಯುಜಿಸಿ ಅನುಮೋದಿತ ಕೋರ್ಸ್‌ಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕೋರ್ಸ್‌ಗಳ ವಿವರ:

ಸ್ನಾತಕ/ಸ್ನಾತಕೋತ್ತರ ಪದವಿಗಳಾದ ಬಿ.ಎ., ಬಿ.ಕಾಂ., ಬಿ.ಎಸ್ಸಿ, ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ, ಬಿ.ಲಿಬ್.ಐ.ಎ.ಸ್ಸಿ, ಎಂಎ.ಎಂ.ಕಾಂ.ಎಂಎಸ್ಸಿ,ಎಂಬಿಎ, ಎಂಸಿಎ, ಎಂ.ಎಸ್.ಡಬ್ಲ್ಯೂ,ಎಂ.ಲಿಬ್,ಐಎಸ್ಸಿ,ಪಿಜಿ ಸರ್ಟಿಫಿಕೇಟ್ ಪ್ರೋಗ್ರಾಂ, ಡಿಪ್ಲೊಮಾ ಪ್ರೊಗ್ರಾಮ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್ ಗಳಿಗೆ ವಿವಿಧ ವೃತ್ತಿಪರ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪ್ರವೇಶಾತಿ ಲಭ್ಯವಿದೆ.

ಅರ್ಜಿ ಸಲ್ಲಿಕೆಗೆ ಮಾರ್ಚ್ 30 ಅಂತಿಮ ದಿನ:

ಜೂನ್ ಆವೃತ್ತಿಯಂತೆಯೇ ಜನವರಿ ಆವೃತ್ತಿಯಲ್ಲೂ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಅವಕಾಶವಿದ್ದು,ದಿನಾಂಕ: 09.01.2026 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು,  ಮಾರ್ಚ್ 30, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ವಿವಿಯ ಅಧಿಕೃತ ಪೋರ್ಟಲ್ ksoumysuru.ac.in ಮೂಲಕ ನೋಂದಾಯಿಸಿಕೊಳ್ಳಬಹುದು.

ದಾಖಲೆ ಪರಿಶೀಲನೆ:

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಬೆಂಗಳೂರಿನ ಹಜ್ ಭವನದಲ್ಲಿರುವ ಪ್ರಾದೇಶಿಕ ಕೇಂದ್ರ ಅಥವಾ ಆಯಾ ವ್ಯಾಪ್ತಿಯ ಕಚೇರಿಗಳಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸಿ ಪ್ರವೇಶಾತಿ ದೃಢೀಕರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ನ Admission Section ಗೆ ಭೇಟಿ ನೀಡಬಹುದು.

ಅಧಿಕೃತ ಪಾವತಿ: ವಿಶ್ವವಿದ್ಯಾನಿಲಯವು ನಿಗದಿಪಡಿಸಿದ ಶುಲ್ಕವನ್ನು ಮಾತ್ರ KSOU ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು. ಯಾವುದೇ ಹೆಚ್ಚುವರಿ ಹಣವನ್ನು ಯಾರಿಗೂ ನೀಡಬಾರದು.ಆದಾಗ್ಯೂ ವಿದ್ಯಾರ್ಥಿಗಳು/ಪೋಷಕರು ಯಾವುದೇ ಹೆಚ್ಚುವರಿ ಶುಲ್ಕ ನೀಡಿದಲ್ಲಿ ವಿವಿ ನಿಲಯವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಗಿರೀಶ ಹೆಚ್.ಎನ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

10% ಬೋಧನಾ ಶುಲ್ಕ ರಿಯಾಯಿತಿ: ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮಹಿಳೆಯರು, ರಕ್ಷಣಾ ಸಿಬ್ಬಂದಿ (Defence/Ex-servicemen), ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಕುಟುಂಬದವರು ಹಾಗೂ ಸಾರಿಗೆ ಸಂಸ್ಥೆಗಳ (KSRTC/BMTC ಇತ್ಯಾದಿ) ನೌಕರರಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಈ ರಿಯಾಯಿತಿ ಲಭ್ಯ.

ಪೂರ್ಣ ಶುಲ್ಕ ವಿನಾಯಿತಿ:

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ.

ಶೇ. 50ಕ್ಕಿಂತ ಹೆಚ್ಚು ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (B.Ed ಮತ್ತು MBA ಹೊರತುಪಡಿಸಿ).

ತೃತೀಯ ಲಿಂಗಿ (Transgender) ವಿದ್ಯಾರ್ಥಿಗಳಿಗೆ.

ವಿದ್ಯಾರ್ಥಿ ವೇತನ: SC/ST ವಿದ್ಯಾರ್ಥಿಗಳು ಸರ್ಕಾರದ State Scholarship Portal (SSP) ಮೂಲಕ ಅಗತ್ಯ ದಾಖಲೆ ನೀಡಿ ಸ್ಕಾಲರ್‌ಶಿಪ್ ಪಡೆಯಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗೆ:ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಬೆಂಗಳೂರು ಪ್ರಾದೇಶಿಕ ಕೇಂದ್ರ ಹಜ್ ಭವನ, ಹಜ್ ಭವನ, ತಿರುಮೇನಹಳ್ಳಿ ಕ್ರಾಸ್, ಹೆಗಡೆನಗರ ಮುಖ್ಯ ರಸ್ತೆ ಬೆಂಗಳೂರು-560064 ದೂರವಾಣಿ ಸಂಖ್ಯೆ:-9448668880 ಅನ್ನು ಸಂಪರ್ಕಿಸಬಹುದಾಗಿದೆ.


Share this with Friends

Related Post