ಮೈಸೂರು,ಜ.ಫೆ.1: ಸಂಸದ ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರಿಗೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತಡೆಯಾಜ್ಞೆ ನೀಡಿದೆ.ಜತೆಗೆ ಈ ಬಗ್ಗೆ ಸಮನ್ಸ್ ಕೂಡ ಜಾರಿ ಮಾಡಿದೆ.ಪ್ರತಾಪ್ ಸಿಂಹ ಕುರಿತ ಸುದ್ದಿಗೋಷ್ಠಿಗಳ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾವುದೇ ಪತ್ರಿಕೆ ಹಾಗೂ ಟಿವಿ ಮಾಧ್ಯಮಕ್ಕೆ ಹೇಳಿಕೆ ನೀಡುವಂತಿಲ್ಲ. ಸ್ಥಳೀಯ ಕೇಬಲ್ ಚಾನಲ್, ರೇಡಿಯೋ, ಸಾಮಾಜಿಕ ಮಾಧ್ಯಮ ಯಾವುದರಲ್ಲೂ ಯಾವುದೇ ಸ್ವರೂಪದ ಹೇಳಿಕೆ ನೀಡುವಂತಿಲ್ಲ. ಅವರ ವಿರುದ್ಧ ಪತ್ರಿಕಾಗೋಷ್ಠಿ ಕೂಡಾ ನಡೆಸುವಂತಿಲ್ಲ ಎಂದು ಸೂಚಿಸಿ ಲಕ್ಷ್ಮಣ್ ಅವರಿಗೆ ಸೂಚಿಸಿದೆ.