ಕಾಗವಾಡ: ಇಲ್ಲಿನ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ (ಎಎಸ್‌ಐ) ಜಯಾನಂದ ಸೋನಾವಣೆ ಅವರ ಧರ್ಮಪತ್ನಿ ಶಿವಲೀಲಾ ಜಯಾನಂದ ಸೋನಾವಣೆ (49) ಅವರು ಬುಧವಾರ ಬೆಳಗಿನ ಜಾವ ನಿಧನರಾದರು.
ಕಳೆದ ಕೆಲವು ದಿನಗಳಿಂದ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಫೆಬ್ರುವರಿ 10 ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರುವರಿ 25ರ ಬುಧವಾರ ಬೆಳಿಗ್ಗೆ 6:45ಕ್ಕೆ ಅವರು ಲಿಂಗೈಕ್ಯರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

