ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಯ ಸ್ಟ್ರೇ ವೇಕೆನ್ಸಿ ಸುತ್ತಿನ ನಂತರ ಬಾಕಿ ಉಳಿದಿರುವ 783 ಸೀಟುಗಳ ಹಂಚಿಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮಾರ್ಚ್ 11ರಂದು ವಿಶೇಷ ಕೌನ್ಸೆಲಿಂಗ್ ಹಮ್ಮಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು, “ಇದುವರೆಗೆ ಯಾವುದೇ ಹಂತದ ಕೌನ್ಸೆಲಿಂಗ್ನಲ್ಲಿ ಸೀಟು ಪಡೆಯದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಲಭ್ಯವಿರುವ ಸೀಟುಗಳು, ಕಾಲೇಜು ಮತ್ತು ಶುಲ್ಕದ ವಿವರಗಳನ್ನು ಕೆಇಎ ವೆಬ್ಸೈಟ್ನಲ್ಲಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಭಾಗವಹಿಸುವ ಕ್ರಮ:
ಆಸಕ್ತ ಅಭ್ಯರ್ಥಿಗಳು ತಮಗೆ ಬೇಕಿರುವ ಕೋರ್ಸ್ನ ಪೂರ್ಣ ಶುಲ್ಕದ ಡಿ.ಡಿ (Demand Draft) ಅಥವಾ ಚೆಕ್ನೊಂದಿಗೆ ಮಾ.11ರಂದು ಮಧ್ಯಾಹ್ನ 3 ಗಂಟೆಯೊಳಗೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದಾಗಿ ಹಾಜರಾಗಬೇಕು. ಡಿ.ಡಿ/ಚೆಕ್ ಅನ್ನು ‘Executive Director, KEA, Bangalore’ ಹೆಸರಿನಲ್ಲಿ ಪಡೆದಿರಬೇಕು.
ಪ್ರಮುಖ ದಿನಾಂಕಗಳು:
ದಾಖಲೆ ಸಲ್ಲಿಕೆ: ಮಾ.11ರ ಮಧ್ಯಾಹ್ನ 3ರೊಳಗೆ (ಮೂಲ ದಾಖಲೆಗಳೊಂದಿಗೆ).
ಆಪ್ಷನ್ ಎಂಟ್ರಿ: ಮಾ.11ರ ಮಧ್ಯಾಹ್ನ 12.30ರಿಂದ ಸಂಜೆ 4ರವರೆಗೆ.
ಫಲಿತಾಂಶ: ಮಾ.11ರ ಸಂಜೆ 7 ಗಂಟೆಗೆ.
ವರದಿ ಸಲ್ಲಿಕೆ: ಸೀಟು ಹಂಚಿಕೆಯಾದವರು ಮಾ.12ರ ಸಂಜೆ 5.30ರೊಳಗೆ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಬೇಕು.

