Wed. Mar 11th, 2026

ಡಾ. ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆ ವಿವಾದ: ಸೂಕ್ತ ಕ್ರಮದ ಭರವಸೆ ನೀಡಿದ ಡಿಸಿಎಂ

Share this with Friends

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಯಲ್ಲಿ ರೖತರಿಗೆ ಅನುಕೂಲ ಆಗುವಂತೆ ಹಾಗೂ ಬಿಡಿಎಗೆ ಲಾಭವಾಗುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೖಗೊಳ್ಳಲಿದೆ ಈ ಸಂಬಂಧ ಸದ್ಯದಲ್ಲಿಯೇ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೊಚನೆಯಡಿ ಶಾಸಕರಾದ ಎಸ್. ಆರ್. ವಿಶ್ವನಾಥ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಯಲಹಂಕದಲ್ಲಿ ನಿರ್ಮಿಸಲಾಗಿರುವ ಲೇಔಟ್ ಬಹುತೇಕ ಪೂರ್ಣಗೊಂಡಿದ್ದು, ಹೖಕೋರ್ಟ್ ಎರಡುವರೆ ತಿಂಗಳ ಹಿಂದೆಯೇ  ಜಮೀನು ನೀಡಿರುವ ರೖತರಿಗೆ ಮೊದಲು ಪರ್ಯಾಯ ನಿವೇಶನಗಳನ್ನು ನೀಡಿ, ನಂತರ ಸಾರ್ವಜನಿಕರಿಗೆ ನೀಡುವಂತೆ ತಿಳಿಸಿದ್ದರೂ ಇನ್ನೂ ಯಾವುದೇ ರೀತಿಯಲ್ಲಿ ಸರ್ಕಾರ ಕ್ರಮ ವಹಿಸದಿರುವುದರಿಂದ ರೖತರಿಗೆ ತಮ್ಮ ಕಷ್ಟ ಸುಖಗಳನ್ನು ಪೊರೖಸಿಕೊಳ್ಳಲು ಆಗುತ್ತಿಲ್ಲ. ಕಾರ್ನರ್ ವಿವೇಶನಗಳನ್ನು ಬಿಡಿಎ ಹರಾಜು ಮಾಡಬಹುದು, ಆದರೆ 100, 80 ಮತ್ತು 60 ಅಡಿ ರಸ್ತೆಯ ನಿವೇಶನಗಳನ್ನು ಕಾಯ್ದಾರಿಸಿಕೊಳ್ಳುವುದು ಸರಿಯಲ್ಲ. ರೖತರಿಗೂ ಆ ನಿವೇಶನಗಳು ಸಿಗಬೇಕು ಎಂದು ಉಪಮುಖ್ಯಮಂತ್ರಿ ಅವರ ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಅವರು ನಮಗಿಂತ ನಿಮಗೆ ಬಿಡಿಎ ಬಗ್ಗೆ ಹೆಚ್ಚು ಗೊತ್ತು. ನೀವು ಬಿಡಿಎ ಚೇರ್ಮನ್ ಆಗಿದ್ದವರು. ಆದಷ್ಟು ಜಮೀನು ನೀಡಿರುವವರಿಗೆ ಅವರ ಜಾಗದಲ್ಲಿಯೇ ನಿವೇಶ ನೀಡಬೇಕು ಎಂದುಕೊಂಡಿದ್ದೇವೆ. ಆದರೆ ಬಹಳಷ್ಟು ಜನರು ಒಂದೇ ಜಾಗದಲ್ಲಿ ನಮಗೆ ನಿವೇಶನಗಳನ್ನು ಕೊಡಿ, ನಮಗೆ ಅನುಕೂಲ ಆಗುತ್ತದೆ ಎಂದು ಕೇಳಿಕೊಂಡಿದ್ದಾರೆ. ಹಾಗಾಗಿ ಅವರ ಮನವಿಯನ್ನು ಪರಿಶೀಲಿಸುತ್ತಿದ್ದೇವೆ.

ಒಬ್ಬರಿಗೆ 100 ಅಡಿ ರಸ್ತೆ ಇರುವಲ್ಲಿ ಕೊಟ್ಟು, ಮತ್ತೊಬರಿಗೆ ಕೊಡದಿರುವುದು ಸರಿಯಾಗುವುದಿಲ್ಲ. ಹಾಗೆಯೇ ಲೇಔಟ್ ಮಾಡುವಾಗ ಇದೇ  ಜಮೀನಿನಲ್ಲಿ 100 ಅಡಿ ರಸ್ತೆ ಬರುವಂತೆ  ಮಾಡಲು ಸಾಧ್ಯವಿರುವುದಿಲ್ಲ. ನಾವು ಈ ಸಮಸ್ಯೆಗಾಗಿ ಹೊಸ ಸಾಫ್ಟ್ ವೇರ್ ಅನ್ನು ಸಿದ್ಧಪಡಿಸುತಿದ್ದೇವೆ. ಜಮೀನು ನೀಡಿದವರಿಗೆ 9600 ನಿವೇಶಗಳನ್ನು ನೀಡುವುದರಲ್ಲಿ ನಮ್ಮ ತಕರಾರು ಏನು ಇಲ್ಲ ಎಂದರು.

ಇಲ್ಲಿಯವರೆಗೆ ಈ ಲೇಔಟ್ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ನಿವೇಶಕ್ಕೆ ಅರ್ಜಿಗಳನ್ನು ತೆಗೆದುಕೊಳ್ಳಲು ಆಗಿಲ್ಲ. ಅದರಿಂದಾಗಿ ಪ್ರತಿ ವರ್ಷ ಒಂದು ಸಾವಿರ ಕೋಟಿ ನಷ್ಟವಾಗುತ್ತಿದೆ.  ನಾನೇ ಒತ್ತಡ ಹಾಕಿ ಕೋರ್ಟ್ ನಿಂದ ಅನುಮತಿ ಪಡೆದುಕೊಂಡಿದ್ದೇನೆ. ಇದೇ 13 ನೇ ತಾರೀಖು ಮತ್ತೆ ಕೋರ್ಟ್ ಇದೆ. ಸರ್ಕಾರ ಯಾವುದೇ ಕಾರಣಕ್ಕೂ ರೖತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸದ್ಯದಲ್ಲಿಯೇ ತಮನ್ನೂ ಒಳಗೊಂಡಂತೆ ಬಿಡಿಎ ಕಚೇರಿಯಲ್ಲಿ ಒಂದು ಸಭೆಯನ್ನು ನಡೆಸಿ ತೀರ್ಮಾನ ಮಾಡೋಣ ಎಂದು ಶಾಸಕರಿಗೆ ಉಪಮುಖ್ಯಮಂತ್ರಿಗಳು ಭರವಸೆ ನೀಡಿದರು.

 


Share this with Friends

Related Post