ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಲ್ಲಾ ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಧೂಮಪಾನ ಸ್ಥಳ ತೆರವು ಮಾಡುವಂತೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕಟ್ಟು ನಿಟ್ಟಾಗಿ ನಿಯಮ ಪಾಲನೆಗೆ ಆದೇಶ ನೀಡಲಾಗಿದ್ದು, ಹೋಟೆಲ್, ಪಬ್ , ರೆಸ್ಟೋರೆಂಟ್ ಗಳಲ್ಲಿ ಅಕ್ರಮವಾಗಿ ನಿಗದಿ ಪಡಿಸಿರುವ ಧೂಮಪಾನ ಸ್ಥಳ ಅಥವಾ ಕೊಠಡಿಗಳನ್ನು ತೆರವು ಮಾಡಬೇಕು.
ಬಿಬಿಎಂಪಿ ಎನ್ ಒಸಿಯಲ್ಲಿ ತಿಳಿಸಿದ ಮಾನದಂಡದಂತೆ ಸ್ಥಳಗಳನ್ನು ನಿಗದಿ ಮಾಡಬೇಕು ಎಂದು ತಿಳಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಆಹಾರ, ನೀರು, ಪಾನಿಯ, ತಂಬಾಕು ಉತ್ಪನ್ನ ಒದಗಿಸುವುದು, ಪೂರೈಸುವುದನ್ನು ನಿಷೇಧಿಸಲಾಗಿದೆ. ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು. ಧೂಮಪಾನಿಗಳಲ್ಲದವರನ್ನು ಹಾನಿಕಾರ ತಂಬಾಕು ಹೊಗೆಯಿಂದ ರಕ್ಷಿಸುವುದು ಮುಖ್ಯ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
- ಸಿಲಿಕಾನ್ ಸಿಟಿಯ ಭವಿಷ್ಯಕ್ಕೆ ಹೊಸ ಭಾಷ್ಯ: 2026-27ರ ಬಜೆಟ್ನಲ್ಲಿ ಬೆಂಗಳೂರು ವಿಕಾಸದ ನೀಲನಕ್ಷೆ
- ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ‘ಆರ್ಥಿಕ ಚಾರ್ಜ್ಶೀಟ್’ ಬಿಡುಗಡೆ
- ಅರಣ್ಯದ ಒಂದಿಂಚು ಭೂಮಿಯೂ ಒತ್ತುವರಿಯಾಗದಂತೆ ರಕ್ಷಿಸಿ: ಸಚಿವ ಈಶ್ವರ ಖಂಡ್ರೆ
- ಕೇಂದ್ರದ ಅಸಹಕಾರದ ನಡುವೆಯೂ ರಾಜ್ಯದ ಪ್ರಗತಿ: ಸಿಎಂ ಸಿದ್ದರಾಮಯ್ಯ
- ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ವೇಗ ಕಡಿತ: ಪ್ರಯಾಣಿಕರಿಗೆ ಸಮಯದ ಬಿಸಿ

