Sun. Jul 5th, 2026

ಕಾಗವಾಡ JMFC ಆದೇಶ: ಅಪ್ರಾಪ್ತ ವಯಸ್ಸಿನ ಬಾಲಕನ ತಂದೆಗೆ 25 ಸಾವಿರ ದಂಡ

Share this with Friends

ವರದಿ: ವಿಕಿಲ‌ ಎಸ್. ಹಿರೇಮಠ

ಕಾಗವಾಡ: ಅಪ್ರಾಪ್ತ ವಯಸ್ಸಿನ ಬಾಲಕನ ಕೈಯಲ್ಲಿ ತಂದೆ ದ್ವಿಚಕ್ರ ವಾಹನ ಕೊಟ್ಟು ನ್ಯಾಯಲಯಕ್ಕೆ ದಂಡ ಕಟ್ಟಿದ ಘಟನೆ ಕಾಗವಾಡ ಜೆಎಂಎಫಸಿ‌ ನ್ಯಾಯಲಯದಲ್ಲಿ ಶನಿವಾರ ಸಂಜೆ ನಡೆದಿದೆ.

ಕಾಗವಾಡ ತಾಲೂಕಿನ ಮಂಗಸೂಳಿ‌‌‌ ಗ್ರಾಮದ ನಿವಾಸಿಯಾದ ಮಕ್ರಂದ್ ಮಲ್ಲಪ್ಪ ಮಗದುಮ್ಮ ಮಗನು ಅಪ್ರಾಪ್ತರಾಗಿದ್ದು ಇತನು ತಂದೆಯ ದ್ವೀಚಕ್ರ ಚಲಾವಣೆ ಮಾಡಿದ್ದು ಬೆಳಗಾವಿ ಜಿಲ್ಲಾ ಪೊಲೀಸ್ ಕಾಗವಾಡ ಪೊಲೀಸ್ ಠಾಣೆಯ ಸರಹದ್ದಿನಲ್ಲಿ‌ ಅಳವಡಿಸಿರುವ (automatic number plate recognition camera – ANPRC) ದಲ್ಲಿ ನಿಯಮ ಉಲ್ಲಂಘಿನೆ ಪ್ರಕರಣ ದಾಖಲಾಗಿತ್ತು.

ಅದನ್ನು ಶನಿವಾರ ಕಾಗವಾಡ ಜೆಎಂಎಫಸಿ ನ್ಯಾಯಾಧೀಶರಾದ ರೂಪಾ‌ ಚಿನಿವಾರ ವಿಚಾರಣೆ ನಡೆಸಿ ಅಪ್ರಾಪ್ತ ಬಾಲಕನ ತಂದೆಗೆ 25000 ರೂ ದಂಡವನ್ನು ಭರಿಸಲು ಆದೇಶಿಸಿಲಾಗಿದೆ ಎಂದು ಪ್ರಕಟಣೆ ತಿಳಿಸಿಲಾಗಿದೆ.


Share this with Friends

Related Post