Sat. Jun 6th, 2026

ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನಾಚರಣೆ: ಗುಬ್ಬಚ್ಚಿ ಹಬ್ಬ

Share this with Friends

ಮೈಸೂರು,ಮಾ.18: ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಗುಬ್ಬಚ್ಚಿ ಹಬ್ಬ
ವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ (ಜಯನಗರ ರೈಲ್ವೆ ಗೇಟ್) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಶಾಲೆ)ಯಲ್ಲಿ ಮಾರ್ಚ್ 20ರಂದು ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ತಿಳಿಸಿದ್ದಾರೆ.

ಪಕ್ಷಿ ತಜ್ಞರು ಹಾಗೂ ಪರಿಸರವಾದಿ ಸಪ್ತ ಗಿರೀಶ್ ಎಂ ಕೆ,ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಆರ್ ಎಚ್ ಪವಿತ್ರ,
ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ,
ಪರಿಸರ ಪ್ರೇಮಿ ಶ್ರೀನಿವಾಸ್ ಭಾಷ್ಯಂ,
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮೋಹನ್ ಕುಮಾರ್ ಅಜಯ್ ಶಾಸ್ತ್ರಿ ಮತ್ತಿತರರು ಭಾಗವಹಿಸಲಿದ್ದಾರೆ.


Share this with Friends

Related Post