ಬೆಂಗಳೂರು: ಸ್ಯಾಂಡಲ್ವುಡ್ನ ಪ್ರೀತಿಯ ‘ಸಿಂಡ್ರೆಲಾ’ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಫ್ಯಾಮಿಲಿ ಟೈಮ್ ಹಾಗೂ ವಿಶೇಷ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚಿನ ಬೇಸಿಗೆ ರಜಾದಿನಗಳ ಸುಂದರ ಕ್ಷಣಗಳ ಅಪರೂಪದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಯಾವುದೇ ಆರ್ಡರ್ ಇಲ್ಲದ ಸಮ್ಮರ್ ನೆನಪುಗಳು:
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಫೋಟೋಗಳ ಗುಚ್ಛವನ್ನು (Photo Dump) ಪೋಸ್ಟ್ ಮಾಡಿರುವ ರಾಧಿಕಾ ಪಂಡಿತ್, ಅದಕ್ಕೆ “ಸಮ್ಮರ್ ’26 ಯಾವುದೇ ನಿರ್ದಿಷ್ಟ ಕ್ರಮದಲ್ಲಿಲ್ಲ” (Summer ‘26 in no particular order #photodump 🧿) ಎಂಬ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋಗಳಲ್ಲಿ ಅವರ ಕುಟುಂಬದ ಪ್ರವಾಸ, ಪ್ರಕೃತಿಯ ಸೌಂದರ್ಯ ಹಾಗೂ ಮಕ್ಕಳೊಂದಿಗಿನ ಆಪ್ತ ಕ್ಷಣಗಳು ಕಣ್ಣಿಗೆ ಕಟ್ಟುವಂತಿವೆ.
ಅಭಿಮಾನಿಗಳ ಮನಗೆದ್ದ ಸಿಂಪಲ್ ಕ್ವೀನ್:
ಪೋಸ್ಟ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ರಾಧಿಕಾ ಅವರ ಚಿತ್ರಗಳಿಗೆ ಲೈಕ್ಸ್ ಮತ್ತು ಕಮೆಂಟ್ಗಳ ಸುರಿಮಳೆಯಾಗಿದೆ. ಸ್ಯಾಂಡಲ್ವುಡ್ನ ಸ್ಟಾರ್ ಜೋಡಿಯಾದ ಯಶ್ ಮತ್ತು ರಾಧಿಕಾ ಅವರ ಕೌಟುಂಬಿಕ ಚಿತ್ರಗಳನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಪೋಸ್ಟ್ ಭಾರಿ ಖುಷಿ ನೀಡಿದೆ. ರಾಧಿಕಾ ಅವರ ಮುಗ್ಧ ನಗು ಮತ್ತು ಸ್ಟೈಲಿಶ್ ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದು, ಹಾರ್ಟ್ ಎಮೋಜಿಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

