Wed. Oct 7th, 2026

ಮೋದಿ ಅವರ ಅಂತ್ಯೋದಯ ಸಿದ್ಧಾಂತ, ಸಮರ್ಥ ನಾಯಕತ್ವ ನಮಗೆ ಆದರ್ಶ: ಬಿ.ಎಸ್. ಯಡಿಯೂರಪ್ಪ 

Share this with Friends

ಬೆಂಗಳೂರು: ದೇಶದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವ ಅಂತ್ಯೋದಯ ತತ್ವದೊಂದಿಗೆ ಆಡಳಿತ ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವ ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.

ನಗರದ ಡಾ. ಎಂ.ಸಿ. ಮೋದಿ ಆಸ್ಪತ್ರೆ ರಸ್ತೆಯ ಶಂಕರಮಠ ಆಟದ ಮೈದಾನದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಆಯೋಜಿಸಲಾಗಿದ್ದ ‘ಸೇವಾ ಜ್ಯೋತಿ ಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರ ಜನಪರ ಸಾಧನೆ ಹಾಗೂ ಸೇವಾ ಮನೋಭಾವದ ಕಾರ್ಯಗಳು ದೇಶದ ಪ್ರಗತಿಗೆ ಹೊಸ ಚೈತನ್ಯ ನೀಡಿವೆ ಎಂದು ಅವರು ಈ ವೇಳೆ ಹಾರೈಸಿದರು.

ಕಾಲು ಶತಮಾನದ ನಿರಂತರ ಜನಸೇವೆ:

ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ಸತತ 25 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿ ಯಶಸ್ವಿ ಆಡಳಿತ ಪೂರ್ಣಗೊಳಿಸುತ್ತಿರುವುದು ಭಾರತದ ಇತಿಹಾಸದಲ್ಲೇ ಅತ್ಯಂತ ಹೆಮ್ಮೆಯ ಮೈಲಿಗಲ್ಲಾಗಿದೆ. ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಕಳೆದ 12 ವರ್ಷಗಳಿಂದ ಭಾರತದ ಪ್ರಧಾನಮಂತ್ರಿಯಾಗಿ ಅವರು ಸಲ್ಲಿಸುತ್ತಿರುವ ನಿರಂತರ ದೇಶಸೇವೆ ನಿಜಕ್ಕೂ ಅದ್ವಿತೀಯವಾದುದು ಎಂದು ಯಡಿಯೂರಪ್ಪ ಅವರು ಸ್ಮರಿಸಿದರು.

ದೇಶಕ್ಕಾಗಿ ಮುಡುಪಾದ ಬದುಕು:

ನಮ್ಮ ಪ್ರಧಾನಿಯವರು ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ಒಂದೇ ಒಂದು ದಿನವೂ ರಜೆ ಪಡೆಯದೆ, ತಮ್ಮ ಇಡೀ ಜೀವನವನ್ನೇ ದೇಶದ ಉನ್ನತಿಗಾಗಿ ಮುಡುಪಾಗಿಟ್ಟಿದ್ದಾರೆ. ಇಂತಹ ಕರ್ಮಯೋಗಿ ನಾಯಕನನ್ನು ಪಡೆದಿರುವುದು ಪ್ರತಿ ಭಾರತೀಯನ ಸೌಭಾಗ್ಯ ಎಂದರು.

ಅಧಿಕಾರವಲ್ಲ, ಜನಸೇವೆಯೇ ಮುಖ್ಯ ಧೇಯ:

ಮೋದಿ ಅವರ ಇಡೀ ರಾಜಕೀಯ ಪಯಣವನ್ನು ಅವಲೋಕಿಸಿದರೆ, ಅವರಿಗೆ ರಾಜಕೀಯ ಎನ್ನುವುದು ಕೇವಲ ಅಧಿಕಾರ ಹಿಡಿಯುವ ಮಾರ್ಗವಾಗಿರಲಿಲ್ಲ. ಬದಲಿಗೆ ಅದು ಸಾರ್ವಜನಿಕರ ಸೇವೆ ಹಾಗೂ ದೇಶದ ಪ್ರಗತಿಗೆ ಸಿಕ್ಕ ಅಪೂರ್ವ ಅವಕಾಶವಾಗಿತ್ತು. ಸಾಮಾನ್ಯ ನಾಗರಿಕರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕೆಂಬ ಏಕೈಕ ಸಂಕಲ್ಪದೊಂದಿಗೆ ಅವರು ಅಹರ್ನಿಶಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ನಿರಂತರವಾಗಿ ಜನಸಂಪರ್ಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೋದಿ ಅವರ ಮೇಲಿನ ಅಭಿಮಾನವನ್ನು ಸಾರ್ಥಕಗೊಳಿಸಬೇಕು ಎಂದು ಕರೆ ನೀಡಿದರು

 


Share this with Friends

Related Post