ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗಗಳ ನಡುವಿನ ಪ್ರಾದೇಶಿಕ ವ್ಯಾಪ್ತಿಯ ಬದಲಾವಣೆಯಿಂದಾಗಿ ಮಂಗಳೂರು ಸೆಂಟ್ರಲ್ನಿಂದ ಸಂಚರಿಸುವ ಪ್ರಮುಖ ವಂದೇ ಭಾರತ್ ಎಕ್ಸ್ಪ್ರೆಸ್, ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಸಂಖ್ಯೆಯನ್ನು (Train Numbers) ಬದಲಾಯಿಸಲು ತೀರ್ಮಾನಿಸಲಾಗಿದೆ.
ಈ ಪರಿಷ್ಕೃತ ನಂಬರ್ಗಳು ಜನವರಿ 2027 ರಿಂದ ಜಾರಿಗೆ ಬರಲಿವೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ. ಆದರೆ, ರೈಲುಗಳ ನಿಲುಗಡೆ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಬದಲಾವಣೆಯಾಗಿರುವ ರೈಲು ಸಂಖ್ಯೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ
I. ಎಕ್ಸ್ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು:
ಮಂಗಳೂರು ಸೆಂಟ್ರಲ್ – ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್: ರೈಲು ಸಂಖ್ಯೆ 20631 ಇನ್ಮುಂದೆ 26659 ಆಗಿ ಬದಲಾಗಲಿದೆ (ಜನವರಿ 1, 2027 ರಿಂದ).
ತಿರುವನಂತಪುರಂ – ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್: ರೈಲು ಸಂಖ್ಯೆ 20632 ಇನ್ಮುಂದೆ 26660 ಆಗಿ ಬದಲಾಗಲಿದೆ (ಜನವರಿ 1, 2027 ರಿಂದ).
ಮಂಗಳೂರು ಸೆಂಟ್ರಲ್ – ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್: ರೈಲು ಸಂಖ್ಯೆ 20646 ಇನ್ಮುಂದೆ 26657 ಆಗಿ ಬದಲಾಗಲಿದೆ (ಜನವರಿ 1, 2027 ರಿಂದ).
ಮಡಗಾಂವ್ – ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್: ರೈಲು ಸಂಖ್ಯೆ 20645 ಇನ್ಮುಂದೆ 26658 ಆಗಿ ಬದಲಾಗಲಿದೆ (ಜನವರಿ 1, 2027 ರಿಂದ).
ತಿರುವನಂತಪುರಂ – ಮಂಗಳೂರು ಮಲಬಾರ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16629 ಇನ್ಮುಂದೆ 16230 ಆಗಿ ಬದಲಾಗಲಿದೆ.
ಮಂಗಳೂರು – ತಿರುವನಂತಪುರಂ ಮಲಬಾರ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16630 ಇನ್ಮುಂದೆ 16229 ಆಗಿ ಬದಲಾಗಲಿದೆ.
ಮಂಗಳೂರು – ತಿರುವನಂತಪುರಂ ಮಾವೇಲಿ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16603 ಇನ್ಮುಂದೆ 16233 ಆಗಿ ಬದಲಾಗಲಿದೆ.
ತಿರುವನಂತಪುರಂ – ಮಂಗಳೂರು ಮಾವೇಲಿ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16604 ಇನ್ಮುಂದೆ 16234 ಆಗಿ ಬದಲಾಗಲಿದೆ.
ಮಂಗಳೂರು – ಕನ್ನಿಯಾಕುಮಾರಿ ಪರಶುರಾಮ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16649 ಇನ್ಮುಂದೆ 16249 ಆಗಿ ಬದಲಾಗಲಿದೆ.
ಕನ್ನಿಯಾಕುಮಾರಿ – ಮಂಗಳೂರು ಪರಶುರಾಮ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16650 ಇನ್ಮುಂದೆ 16250 ಆಗಿ ಬದಲಾಗಲಿದೆ.
ಮಂಗಳೂರು – ತಿರುವನಂತಪುರಂ ಏರ್ನಾಡ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16605 ಇನ್ಮುಂದೆ 16237 ಆಗಿ ಬದಲಾಗಲಿದೆ.
ತಿರುವನಂತಪುರಂ – ಮಂಗಳೂರು ಏರ್ನಾಡ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16606 ಇನ್ಮುಂದೆ 16238 ಆಗಿ ಬದಲಾಗಲಿದೆ.
ಮಂಗಳೂರು – ರಾಮೇಶ್ವರಂ ವೀಕ್ಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16622 ಇನ್ಮುಂದೆ 16241 ಆಗಿ ಬದಲಾಗಲಿದೆ (ಜನವರಿ 2, 2027 ರಿಂದ).
ರಾಮೇಶ್ವರಂ – ಮಂಗಳೂರು ವೀಕ್ಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16621 ಇನ್ಮುಂದೆ 16242 ಆಗಿ ಬದಲಾಗಲಿದೆ (ಜನವರಿ 3, 2027 ರಿಂದ).
ಮಂಗಳೂರು – ಕೊಯಮತ್ತೂರು ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16324 ಇನ್ಮುಂದೆ 16243 ಆಗಿ ಬದಲಾಗಲಿದೆ.
ಕೊಯಮತ್ತೂರು – ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16323 ಇನ್ಮುಂದೆ 16244 ಆಗಿ ಬದಲಾಗಲಿದೆ.
ಮಂಗಳೂರು ಸೆಂಟ್ರಲ್ – ಪಾಲಕ್ಕಾಡ್ ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16610 ಇನ್ಮುಂದೆ 16245 ಆಗಿ ಬದಲಾಗಲಿದೆ.
ಪಾಲಕ್ಕಾಡ್ – ಕಣ್ಣೂರು ಡೈಲಿ ಎಕ್ಸ್ಪ್ರೆಸ್: ರೈಲು ಸಂಖ್ಯೆ 16611 ಇನ್ಮುಂದೆ 16246 ಆಗಿ ಬದಲಾಗಲಿದೆ.
II. ದಿನನಿತ್ಯದ ಪ್ಯಾಸೆಂಜರ್ ರೈಲುಗಳು (ಜನವರಿ 1, 2027 ರಿಂದ ಜಾರಿ):
ಕಣ್ಣೂರು – ಕೋಝಿಕ್ಕೋಡ್ ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56632 ಇನ್ಮುಂದೆ 56211 ಆಗಲಿದೆ.
ಕೋಝಿಕ್ಕೋಡ್ – ಕಣ್ಣೂರು ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56617 ಇನ್ಮುಂದೆ 56212 ಆಗಲಿದೆ.
ಕಣ್ಣೂರು – ಚರ್ವತ್ತೂರು ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56619 ಇನ್ಮುಂದೆ 56213 ಆಗಲಿದೆ.
ಚರ್ವತ್ತೂರು – ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56621 ಇನ್ಮುಂದೆ 56214 ಆಗಲಿದೆ.
ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56625 ಇನ್ಮುಂದೆ 56225 ಆಗಲಿದ್ದು, ರೈಲು ಸಂಖ್ಯೆ 56627 ಇನ್ಮುಂದೆ 56227 ಆಗಲಿದೆ. ಹಾಗೆಯೇ ರೈಲು ಸಂಖ್ಯೆ 56629 ಇನ್ಮುಂದೆ 56233 ಆಗಿ ಬದಲಾಗಲಿದೆ.
ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56626 ಇನ್ಮುಂದೆ 56226 ಆಗಲಿದ್ದು, ರೈಲು ಸಂಖ್ಯೆ 56628 ಇನ್ಮುಂದೆ 56228 ಆಗಲಿದೆ. ಹಾಗೆಯೇ ರೈಲು ಸಂಖ್ಯೆ 56630 ಇನ್ಮುಂದೆ 56234 ಆಗಿ ಬದಲಾಗಲಿದೆ.
ಮಡಗಾಂವ್ – ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56615 ಇನ್ಮುಂದೆ 56216 ಆಗಲಿದೆ.
ಮಂಗಳೂರು ಸೆಂಟ್ರಲ್ – ಮಡಗಾಂವ್ ಡೈಲಿ ಪ್ಯಾಸೆಂಜರ್: ರೈಲು ಸಂಖ್ಯೆ 56616 ಇನ್ಮುಂದೆ 56215 ಆಗಲಿದೆ.

