Mon. Dec 23rd, 2024

ಮಾನಸಿಕ ಖಿನ್ನತೆಯಿಂದ ಯುವ ವಕೀಲ ಆತ್ಮಹತ್ಯೆ

Share this with Friends

ಮೈಸೂರು,ಫೆ.8: ವಾದ ಮಾಡಿ ಜನರಿಗೆ ನ್ಯಾಯ ನೀಡಬೇಕಾದ‌ ಯುವ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ರಾಜೀವ್ ನಗರದ ವಾಸಿ ನಿಂಗರಾಜು(33)ಆತ್ಮಹತ್ಯೆ ಮಡಿಕೊಂಡ ವಕೀಲ.

ನಿಂಗರಾಜು ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು,ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡರು. ನಿಂಗರಾಜು ಅವರಿಗೆ ಸಂತಾಪ ಸೂಚಿಸಿ ಇಂದು ನ್ಯಾಯಾಲಯದಲ್ಲಿ ವಕೀಲರು ಮೌನ ಆಚರಿಸಿ ಶ್ರದ್ದಾಂಜಲಿ ಅರ್ಪಿಸಿದರು.


Share this with Friends

Related Post