ಮಹಾರಾಷ್ಟ್ರ, ಏ.10: ಬೆಕ್ಕನ್ನು ರಕ್ಷಿಸಲು ಹೋಗಿ ಐದು ಮಂದಿ ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದಿದೆ.
ಬೆಕ್ಕು ಬಾವಿಗೆ ಬಿದ್ದದ್ದನ್ನು ಕಂಡು ಒಬ್ಬರ ನಂತರ ಒಬ್ಬರು ಹಾರಿ ಐದು ಮಂದಿಯೂ ಜೀವ ತೆತ್ತಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ನೆವಾಸಾ ತಹಸಿಲ್ನ ಜಮೀನಿನಲ್ಲಿ ಈ ಘಟನೆ ನಡೆದಿದೆ. ಒಟ್ಟು ಆರು ಮಂದಿ ಬಾವಿಗೆ ಹಾರಿದ್ದಾರೆ,ಆದರೆ ಅವರಲ್ಲಿ ಒಬ್ಬ ಸೊಂಟಕ್ಕೆ ಹಗ್ಗ ಕಟ್ಟಿಕೊಂಡಿದ್ದರಿಂದ ಬದುಕುಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಳುಬಿದ್ದ ಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗುತ್ತಿದ್ದು, ಬಹಳ ದಿನಗಳಿಂದಲೂ ಈ ಬಾವಿಯನ್ನು ಮುಚ್ಚಿದ್ದರೂ ಅದರಲ್ಲೇ ಕಸ ಸುರಿಯಲಾಗುತ್ತಿತ್ತು. ಜೈವಿಕ ಅನಿಲದಿಂದ ಉತ್ಪತ್ತಿಯಾಗಿದ್ದ ವಿಷಾನಿಲ ದೇಹಕ್ಕೆ ಆವರಿಸಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಸ್ಥಳೀಯರು ದಾವಿಸಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡಿದ್ದವನ್ನು ಎಳೆದು ರಕ್ಷಿಸಿದ್ದಾರೆ,
ಒಟ್ಟಿಗೇ ಐದು ಮಂದಿ ಮೃತಪಟ್ಟಿದ್ದರಿಂದ ಇಡೀ ಗ್ರಾಮ ದುಃಖದ ಕಡಲಲ್ಲಿ ಮುಳುಗಿದೆ.