ಚಾಮರಾಜನಗರ, ಏ.17: ಚಾಮರಾಜನಗರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಏಪ್ರಿಲ್ 11 ರವರೆಗಿನ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಿದ್ದಾರೆ.
ಮೊದಲ ವೆಚ್ಚ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗಿರುವ ವಿವರ ಕೆಳಗಿನಂತಿದೆ.
ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಎಂ. ಕೃಷ್ಣಮೂರ್ತಿ- 46,250ರೂ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಎಸ್. ಬಾಲರಾಜು- 13,98,165ರೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್- 16,45,009ರೂ, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಸಿ.ಎಂ. ಕೃಷ್ಣ-12,500ರೂ, ಕರ್ನಾಟಕ ಜನತಾ ಪಾರ್ಟಿ (ಕೆ.ಜಿ.ಪಿ) ಅಭ್ಯರ್ಥಿ ನಿಂಗರಾಜು. ಎಸ್- 12,500ರೂ, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಭ್ಯರ್ಥಿ ಪ್ರಸನ್ನ ಕುಮಾರ್. ಬಿ-12,500ರೂ, ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ ಅಭ್ಯರ್ಥಿ ಮಹೇಶ್. ಎಂ- 14,375ರೂ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಸುಮ. ಎಸ್- 20,586ರೂ, ಪಕ್ಷೇತರ ಅಭ್ಯರ್ಥಿಗಳಾದ ಎನ್. ಅಂಬರೀಷ್-12,500ರೂ, ನಿಂಗರಾಜು. ಜಿ- 12,500ರೂ, ಪ್ರದೀಪ್ ಕುಮಾರ್. ಎಂ- 12,500ರೂ, ಮಹದೇವಸ್ವಾಮಿ. ಬಿ.ಎಂ- 12,500ರೂ, ಜಿ.ಡಿ. ರಾಜಗೋಪಾಲ- 13,680ರೂ ಹೆಚ್.ಕೆ. ಸ್ವಾಮಿ-12,500 ರೂ. ಗಳ ಚುನಾವಣಾ ವೆಚ್ಚದ ವಿವರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.