Fri. Jun 5th, 2026

ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ

Share this with Friends

ಮೈಸೂರು, ಏ.30: ಅನಾರೋಗ್ಯದಿಂದ ಮೃತಪಟ್ಟ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಮೈಸೂರಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ವಿ.ಶ್ರೀನಿವಾಸ ಪ್ರಸಾದ್ ಅವರ ಭಾವಚಿತ್ರ ಇಟ್ಟು ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ‌ ಸಲ್ಲಿಸಲಾಯಿತು.

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ. ಡಿ ಗೋಪಿನಾಥ್, ಉಪಾಧ್ಯಕ್ಷ ಎಂ. ಎನ್ ಸೌಮ್ಯ, ನಿರ್ದೇಶಕರಾದ ಎಂ. ಆರ್ ಬಾಲಕೃಷ್ಣ, ವಿಕ್ರಮ ಅಯ್ಯಂಗಾರ್, ನಾಗಶ್ರೀ. ಎನ್, ಕೆ. ಎನ್ ಅರುಣ್, ಎಸ್. ರಾಜಮ್ಮ, ಪ್ರಭಾರ ಕಾರ್ಯದರ್ಶಿ ವೀಣಾ ಎನ್, ಹಾಗೂ ಸಿಬ್ಬಂದಿ ಸಂತಾಪ ಸಲ್ಲಿಸಿದರು


Share this with Friends

Related Post