ಮೈಸೂರು,ಮೇ.2: ನಗರದ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ ಶ್ರೀ ಕೃಷ್ಣಧಾಮದಲ್ಲಿ ಉಚಿತ ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮೋಪದೇಶ ನೆರವೇರಿದ ನಂತರ ವಟುಗಳಿಂದ ಶೋಭಾ ಯಾತ್ರೆ ಮತ್ತು ಅಶ್ವತ್ಥ ಪೂಜೆ ನೆರವೇರಿಸಲಾಯಿತು.
ಈ ವೇಳೆ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ ಅವರು ಮಾತನಾಡಿ,ತ್ರಿಮತಸ್ಥ ವಿಪ್ರ ಸಮುದಾಯದವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಈ ಉಚಿತ ಉಪನಯನ ನಡೆಸಿಕೊಂಡು ಬರಲಾಗಿದೆ ಎಂದು ಹೇಳಿದರು.
ವೇದವೆಂದರೆ ಜ್ಞಾನ, ಸಂಸ್ಕೃತಿ, ಪರಂಪರೆಗೆ ಸಾಕ್ಷಿ, ಭಾರತ ಮಾತ್ರವಲ್ಲ ವಿಶ್ವಮಟ್ಟದಲ್ಲೂ ಮಾನ್ಯತೆ ಗಳಿಸಿದೆ. ವೇದ ಮಂತ್ರಗಳು ವ್ಯಕ್ತಿಯ ಜೀವನದ ಸಮಗ್ರ ಚಿತ್ರವನ್ನು ನೀಡಬಲ್ಲವು ಎಂದು ಹೇಳಿದರು.
ವಿದ್ವಾನ್ ಸುರೇಶ್ ಭಟ್ ಅವರು ನೂತನ ವಟುಗಳಿಗೆ ಮಾರ್ಗದರ್ಶನ ನೀಡಿ, ಉಪನಯನದ ಮಹತ್ವ
ತಿಳಿಸಿಕೊಟ್ಟರು.
ಶ್ರೀ ಕೃಷ್ಣ ಟ್ರಸ್ಟ್ ನ ಪಿ ಎಸ್ ಶೇಖರ್, ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಪಿ ಎಸ್ ರಮೇಶ್, ಉಪಾಧ್ಯಕ್ಷ ಪ್ರವೀಣ್,ಶ್ರೀವತ್ಸ ರಾವ್, ರಾಘವೇಂದ್ರ ಪ್ರಸಾದ್, ಶ್ರೀ ಕೃಷ್ಣ ಟ್ರಸ್ಟ್ ಕಾರ್ಯದರ್ಶಿ ಕೆ ವಿ ಶ್ರೀಧರ್ ಮತ್ತಿತರರು ಹಾಜರಿದ್ದರು.