ಬೆಂಗಳೂರು,ಮೇ.6: ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು, ಮಾಹಿತಿದಾರರ ನೆರವಿಗಾಗಿ ಎಸ್ಐಟಿ ಸಹಾಯವಾಣಿ ಸ್ಥಾಪಿಸಿದೆ.
ತನಿಖೆಯ ಸಂದರ್ಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಸಂತ್ರಸ್ತರು ಇರುವುದು ತಿಳಿದು ಬಂದಿದ್ದು,ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಕಾನೂನು ನೆರವು ಹಾಗೂ ರಕ್ಷಣೆ ನೀಡಲು ಸಹಾಯವಾಣಿ ತೆರೆಯಲಾಗಿದೆ.
ಇಲ್ಲಿ ಕೊಟ್ಟಿರುವ 6360938947 ಸಹಾಯವಾಣಿ ಸಂಖ್ಯೆಗೆ ಸಂತ್ರಸ್ತರು ಸಂಪರ್ಕಿಸಬಹುದಾಗಿದೆ.
ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರು ಸಂಪರ್ಕಿಸಿದರೆ ಅಂತವರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.