Fri. Nov 1st, 2024

ಚೆನ್ನೈ ಕಂಪನಿಯಲ್ಲಿ 3 ಕೋಟಿ ರೂಗೆ ಪೆನ್‌ಡ್ರೈವ್‌ ಖರೀದಿ: ಜಿಟಿಡಿ ಆರೋಪ

Share this with Friends

ಮೈಸೂರು,ಮೇ.9: ಪೆನ್‌ಡ್ರೈವ್‌ ಹಂಚಿಕೆ ಮಾಡಲು ಚೆನ್ನೈನ ಕಂಪನಿಯೊಂದರಲ್ಲಿ 3 ಕೋಟಿ ರೂ.ಗೆ ಪೆನ್‌ಡ್ರೈವ್‌ಗಳನ್ನ
ಖರೀದಿಸಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ,
ಆಸ್ಟ್ರೇಲಿಯಾ ಪ್ರಯೋಗಾಲಯದಲ್ಲಿ ಯಾವುದನ್ನ ಸೇರಿಸಬೇಕು ಎಂಬುದನ್ನ ತಿಳಿದು ಸೇರಿಸಿ ಸಿನಿಮಾ ಮಾಡಿದಂತೆ ಮಾಡಿದ್ದಾರೆ, ಅಲ್ಲಿಂದ ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಅಂತಾರಾಷ್ಟ್ರೀಯ ಜಾಲ ಸೇರಿಕೊಂಡಿದೆ ಎಂದು ದೂರಿದರು.

ಎಸ್‌ಐಟಿ ತನಿಖೆ ರದ್ದಾಗಬೇಕು, ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ ಜಿಟಿಡಿ, ಈಗಿರುವ ಎಸ್‌ಐಟಿಯಿಂದ ಏನೂ ಕಂಡುಹಿಡಿಯಲು ಆಗುವುದಿಲ್ಲ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಅವರದು ಎನ್ನಲಾಗುತ್ತಿರುವ ಪೆನ್‌ಡ್ರೈವ್‌ ಯಾರು ರಿಲೀಸ್ ಮಾಡಿದರು ಅನ್ನೋ ಬಗ್ಗೆ ತನಿಖೆ ನಡೆಯುತ್ತಿಲ್ಲ, ಒಂದು ಪಕ್ಷದ ಮೇಲೆ ಗದಾಪ್ರಹಾರ ಮಾಡುವ ಕೆಲಸ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಜಿಟಿಡಿ ಕಿಡಿ ಕಾರಿದರು.

ಜೆಡಿಎಸ್ ಮುಗಿಸಲು ಸಿಎಂ, ಡಿಸಿಎಂ ಮುಂದಾಗಿದ್ದಾರೆ. ಈ ಪೆನ್‌ಡ್ರೈವ್‌ ಕೇಸ್ ಹಿಂದೆ ಅಂತಾರಾಷ್ಟ್ರೀಯ ಜಾಲವೇ ಇದೆ. ಅವರನ್ನ ತನಿಖೆ ಮಾಡುವುದಕ್ಕೆ ಕರ್ನಾಟಕ ಪೊಲೀಸರಿಂದ ಸಾಧ್ಯವಿಲ್ಲ. ಸಿಬಿಐ ತನಿಖೆ ಬಿಟ್ಟರೆ ಬೇರೆ ಯಾವುದೇ ತನಿಖೆಯಿಂದ ನ್ಯಾಯ ಸಿಗಲು‌ ಸಾಧ್ಯವಿಲ್ಲ ಎಂದು ಹೇಳಿದರು.


Share this with Friends

Related Post