ಮೈಸೂರು, ಮೇ.22: ವಾರಣಾಸಿ ಲೋಕಸಭಾ ಕ್ಷೇತ್ರದ ಕಾಶಿ ಮಹಾನಗರಕ್ಕೆ ಮಾಜಿ ಸಚಿವ ಎಸ್ ಎ ರಾಮದಾಸ್ ನೇತೃತ್ವದ ಬಿಜೆಪಿ ತಂಡ ಭೇಟಿಕೊಟ್ಟಿತು.
ಕಾಶಿನಗರದ ಹನುಮಾನ್ ಘಾಟ್ ನಲ್ಲಿರುವ
ಕನ್ನಡದ ಶ್ರೇಷ್ಠ ಕವಿ ವಿ ಸೀತಾರಾಮಾಯ್ಯನವರ ಮೊಮ್ಮಕ್ಕಳಾದ ಮೈಸೂರಿನ ಸಂಪರ್ಕವನ್ನು ಹೊಂದಿರುವ ಮೈಸೂರು ವಿಶ್ವನಾಥ್ ಶರ್ಮ ಅವರ ಮಕ್ಕಳಾದ ಪ್ರಸನ್ನ ಕುಮಾರ್ ಶರ್ಮ,ಕೇದಾರನಾಥ ಶರ್ಮ ಅವರ ಮನೆಗೆ ಬಿಜೆಪಿ ತಂಡ ಭೇಟಿಕೊಟ್ಟು ವಿ.ಸಿತಾರಾಯ್ಯನವರ ಸಾಧನೆಗಳ ಬಗ್ಗೆ ಚರ್ಚೆ ಮಾಡಿತು.
ಸುಮಾರು 120 ವರ್ಷಕ್ಕೂ ಮೊದಲು ಕಾಶಿಯಲ್ಲಿ ಬಂದು ನೆಲೆಸಿ ವಿಶೇಷವಾಗಿ ಸಂಸ್ಕೃತ ವೇದ ಅಧ್ಯಯನವನ್ನು ಮಕ್ಕಳಿಗೆ ಮಾಡಿಸುವ ದೊಡ್ಡ ಕಾರ್ಯದಲ್ಲಿ ತೊಡಗಿದ್ದ ಈ ಕುಟುಂಬ 6 ತಲೆಮಾರುಗಳಿಂದ ಕಾಶಿಯಲ್ಲಿ ಇದ್ದು ವಿಶೇಷವಾಗಿ ಕನ್ನಡಿಗರೆಲ್ಲರಿಗೂ ಆಶ್ರಯ ಸ್ಥಳವಾಗಿದೆ.
ಇಂದಿಗೂ ವೇದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಅಪರೂಪದ ಕುಟುಂಬವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು, ಸಂತೋಷದ ವಿಷಯ ಎಂದು ಈ ವೇಳೆ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.
ಕನ್ನಡದ ನಾಮಫಲಕವನ್ನು ಇವರ ಮನೆ ಮುಂದೆ ನೋಡಿ ಇನ್ನಷ್ಟು ಖುಷಿಯಾಯಿತು, ಅವರ ಮನೆ ಪುರಾತನವಾಗಿದ್ದು ಮನೆಯ ಒಳಗಡೆ ಶಿವಲಿಂಗ ಸ್ಥಾಪನೆ ಮಾಡಿ ಪ್ರತಿನಿತ್ಯವೂ ಅಭಿಷೇಕ ಮತ್ತು ಪೂಜಾ ಕೈಂ ಕರ್ಯಗಳು ನಡೆಯುತ್ತಿರುವುದು ನೋಡಿ ತುಂಬಾ ಆನಂದವಾಯಿತು ಎಂದು ಹೇಳಿದ್ದಾರೆ.
ಈ ಮನೆಯ ಮೂಲಕ ಅವರಿಗೆ ಸಂಪರ್ಕ ಇರುವವರನ್ನು ಮಾತನಾಡಿಸಿ ಅವರ ಮೂಲಕ ಮತಯಾಚನೆ ಮಾಡುವ ಕಾರ್ಯ ಮಾಡಲಾಯಿತು.
ನಂತರ ರಾತ್ರಿ ಪ್ರಸಾದ ವಿತರಣೆ ಮಾಡಲಾಯಿತು,ತಂಡದಲ್ಲಿ ಶಾಸಕರುಗಳಾದ ಮಹೇಶ್ ಟೆಂಗಿನ ಕಾಯಿ ಯಶ್ ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಕೇಶಪ್ರಸಾದ್, ನವೀನ್, ಹಾಗೂ ಬೂತ್ ನ ಜವಾಬ್ದಾರಿ ಹೊಂದಿರುವ ರಾಜೇಶ್ ಹಾಜರಿದ್ದರು.