Mon. Dec 23rd, 2024

BIG NEWS : ಬಿಹಾರ ಮತ್ತು ರಾಜಸ್ಥಾನಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

Share this with Friends

ನವದೆಹಲಿ ಜುಲೈ 26 : ಭಾರತೀಯ ಜನತಾ ಪಕ್ಷವು ಬಿಹಾರ ಮತ್ತು ರಾಜಸ್ಥಾನಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಿದೆ. ಬಿಹಾರದ ಜವಾಬ್ದಾರಿಯನ್ನು ದಿಲೀಪ್ ಜೈಸ್ವಾಲ್ ಅವರಿಗೆ ನೀಡಿದ್ದು, ರಾಜ್ಯಸ್ಥಾನಕ್ಕೆ ರಾಜ್ಯಸಭಾ ಸದಸ್ಯ ಮದನ್ ರಾಥೋಡ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಇದೇ ವೇಳೆ ಹಲವು ರಾಜ್ಯಗಳಿಗೆ ಉಸ್ತುವಾರಿ ಮತ್ತು ಸಹ ಪ್ರಭಾರಿಗಳನ್ನು ಬಿಜೆಪಿ ನೇಮಿಸಿದೆ.ಅಸ್ಸಾಂ ರಾಜ್ಯಕ್ಕೆ ಹರೀಶ್ ದ್ವಿವೇದಿ, ಚಂಡೀಗಢಕ್ಕೆ ಸಂಸದ ಅತುಲ್ ಗರ್ಗ್, ಲಕ್ಷದ್ವೀಪಕ್ಕೆ ಅರವಿಂದ್ ಮೆನನ್, ರಾಜ್ಯಾಸ್ಥಾನಕ್ಕೆ ರಾಧಾ ಮೋಹನ್ ದಾಸ್ ಅಗರವಾಲ್, ಈಶಾನ್ಯ ರಾಜ್ಯ ತ್ರಿಪುರಕ್ಕೆ ರಾಜದೀಪ್ ರಾಯ್ ಅವರನ್ನು ಉಸ್ತುವಾರಿಯಾಗಿ ನೇಮಿಸಿದೆ.

ರಾಜಸ್ಥಾನದ ಸಹ ಪ್ರಭಾರಿಯಾಗಿ ವಿಜಯ ರಾಹತ್ಕರ್, ತಮಿಳುನಾಡಿನ ಉಸ್ತುವಾಗಿ ಅರವಿಂದ ಮೆನನ್ ಅವರಿಗೆ ಕೊಟ್ಟಿದ್ದು ಇವರ ಸಹ ಪ್ರಭಾರಿಯಾಗಿ ಸುಧಾಕರ್ ರೆಡ್ಡಿಗೆ ಜವಾಬ್ದಾರಿ ನೀಡಲಾಗಿದೆ.


Share this with Friends

Related Post