ಮೈಸೂರು, ಆ.1: ಗುರು ಪೂರ್ಣಿಮೆ ಪ್ರಯುಕ್ತ ನಟರಾಜ ಶಾಲೆಯ ಶಿಕ್ಷಕರನ್ನು
ಯುವ ಕಾಂಗ್ರೆಸ್ ಮುಖಂಡರಾದ ತೇಜಸ್ವಿ ನಾಗಲಿಂಗ ಸ್ವಾಮಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ನಟರಾಜ ಶಾಲೆಯ ಶಿಕ್ಷಕರಾದ
ಅಗ್ರಹಾರದ ನಿವಾಸಿ ರಾಜೇಶ್ವರಿ ಅವರ ನಿವಾಸಕ್ಕೆ ಅಗ್ರಹಾರ ವಾರ್ಡಿನ ಯುವ ಕಾಂಗ್ರೆಸ್ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತಿತರರು ಭೇಟಿ ನೀಡಿದರು.
ಈ ವೇಳೆ ಶಿಕ್ಷಕಿ ರಾಜೇಶ್ವರಿ ಅವರಿಗೆ ಗುರು ಪೂರ್ಣಿಮೆಯ ಶುಭಾಶಯ ತಿಳಿಸಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಪಳನಿ ಸ್ವಾಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿದ್ದರಾಮು, ಯುವ ಮುಖಂಡ ಲಕ್ಷ್ಮಣ್ ಅವರುಗಳು ಸಾಥ್ ನೀಡಿದರು.