Sat. Nov 2nd, 2024

ಮೊದಲ ಹೆಂಡತಿ, ಮಕ್ಕಳ ಜೊತೆ ಸೇರಿ ಎರಡನೇ ಪತ್ನಿ ಕೊಂದ ಪಾಪಿ ಪತಿ‌ ಅಂದರ್

Share this with Friends

ಮೈಸೂರು,ಫೆ.19: ಆಸ್ತಿ ಹೊಡೆಯಲು ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯ ಕೊಂದ ಪಾಪಿ ಪತಿ ಕಂಬಿ ಎಣಿಸುತ್ತಿದ್ದಾನೆ.

ಈ ಹೇಯ ಘಟನೆ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಖಿಲಾ ಬಾನು(46) ಕೊಲೆಯಾದ ದುರ್ದೈವಿ. ಅಬ್ಬ ಥಾಯೂಬ್ ಹಾಗೂ ಮಕ್ಕಳಾದ ಮೊಹಮದ್ ಆಸಿಫ್,ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್ ಕೊಲೆ‌ ಆರೋಪಿಗಳು. ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಅಬ್ಬಥಾಯೂಬ್ 2013 ರಲ್ಲಿ ಅಖಿಲಾ ಬಾನು ಅವರನ್ನು ಎರಡನೇ ವಿವಾಹವಾಗಿದ್ದ. ಮೊದಲ ಹೆಂಡತಿ ಮಕ್ಕಳಿಗೆ ನಾಲ್ವರು ಮಕ್ಕಳು. ಅಖಿಲಾ ಬಾನೂಗೆ ಕ್ಯಾನ್ಸರ್ ಇತ್ತು,ಸಧ್ಯ ಗುಣಮುಖರಾಗಿದ್ದರು,ಆದರೆ ಆಕೆಗೆ ಮಕ್ಕಳಾಗಿರಲಿಲ್ಲ.

ಅಖಿಲಾ ಬಾನು ಅಕ್ಕನ ಮಗ ಸೈಯದ್ ಇರ್ಫಾನ್ ಎಂಬವರು ಆರು ತಿಂಗಳ ಹಿಂದೆ ಚಿಕ್ಕಮ್ಮನಿಗೆ ನಾಯ್ಡುನಗರದಲ್ಲಿ ಆರ್ಥಿಕ ನೆರವು ನೀಡಿ ಮನೆ ಖರೀದಿಸಿಕೊಟ್ಟಿದ್ದರು. ಅಬ್ಬಥಾಯುಬ್ ಹಾಗೂ ಅಖಿಲಾ ಬಾನು ಇಬ್ಬರ ಹೆಸರಲ್ಲಿ ಮನೆ ಜಂಟಿ ಖಾತೆಯಾಗಿತ್ತು.

ಇತ್ತೀಚೆಗೆ ಮನೆಯನ್ನ ಮೊದಲ ಹೆಂಡತಿ ಮಕ್ಕಳಿಗೆ ಬರೆದು ಕೊಡಲು ಅಬ್ಬಥಾಯುಬ್ ಪ್ರಯತ್ನಿಸಿದ್ದ.ಇದರಿಂದಾಗಿ ಗಂಡ ಹೆಂಡತಿ ಮಧ್ಯೆ ಜಗಳ ಆಗಿತ್ತು. ಮೊನ್ನೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ಅಬ್ಬಥಾಯೂಬ್ ಅಖಿಲಾಬಾನು ಮೃತಪಟ್ಟಿದ್ದಾಳೆ ಎಂದು ತಿಳಿಸಿ ದುಃಖಿಸಿದ್ದ. ರಾಜೇಂದ್ರ ನಗರದ ಮನೆಯಲ್ಲಿ ಇರಿಸಲಾಗಿದ್ದ ಅಖಿಲಾಬಾನು ಶವವನ್ನ ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತರಚಿದ ಗಾಯಗಳು ಕಂಡು ಬಂದಿದೆ.

ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್ ತಮ್ಮ ಚಿಕ್ಕಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ನಿರ್ಧರಿಸಿ ಅಬ್ಬ ಥಾಯುಬ್ ಹಾಗೂ ಮೊದಲ ಹೆಂಡತಿ ಮಕ್ಕಳ ವಿರುದ್ಧ ಎನ್ ಆರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಅಬ್ಬ ಥಾಯುಬ್ ಮತ್ತು ಮಕ್ಕಳಾದ ಮಹಮದ್ ಥೋಸಿಫ್, ಮಹಮದ್ ಆಸಿಫ್ ಹಾಗೂ ಮಹಮದ್ ಹೈದರ್ ನನ್ನು ಎನ್.ಆರ್.ಠಾಣಾ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post