Sat. Jun 6th, 2026

ಬೆಂಗಳೂರು ಕ್ಲೈಮೇಟ್ ಸಮಿಟ್ ಆಲ್ಟರ್ನೇಟಿವ್’26 ಲಾಂಛನ ಅನಾವರಣ: ಸುಸ್ಥಿರ ಬೆಂಗಳೂರಿಗಾಗಿ ಡಿಸಿಎಂ ಕರೆ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಹವಾಮಾನ ಬದಲಾವಣೆಯ ಸವಾಲುಗಳಿಂದ ಮುಕ್ತಗೊಳಿಸಿ, ಸುಸ್ಥಿರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ‘ಬೆಂಗಳೂರು ಕ್ಲೈಮೇಟ್ ಸಮಿಟ್ ಆಲ್ಟರ್ನೇಟಿವ್’26’ ರ ಲಾಂಛನ ಹಾಗೂ ಜಾಲತಾಣವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಅನಾವರಣಗೊಳಿಸಿದರು.

ಸಮಿಟ್ ಕ್ಯುರೇಟರ್ ಶ್ರೀ ವಿನಯ್ ಶಿಂದೆ ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು, ನಗರದ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.

ಸಮುದಾಯದ ಸಹಭಾಗಿತ್ವಕ್ಕೆ ಒತ್ತು:

ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಡಿಸಿಎಂ ಅವರು, “ನಮ್ಮ ಬೆಂಗಳೂರಿನ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು ಇಂದಿನ ಅಗತ್ಯವಾಗಿದೆ. ಈ ಅಭಿಯಾನದಲ್ಲಿ ನಾಗರಿಕರು, ಯುವಜನತೆ, ನವೋದ್ಯಮಿಗಳು, ಸಂಘ-ಸಂಸ್ಥೆಗಳು ಮತ್ತು ಕೈಗಾರಿಕಾ ವಲಯದ ಪ್ರಮುಖರನ್ನು ಒಂದೇ ವೇದಿಕೆಯಡಿ ತರುವ ಮೂಲಕ ಸಮಗ್ರ ಬದಲಾವಣೆಗೆ ನಾವು ಮುಂದಾಗಿದ್ದೇವೆ,” ಎಂದು ತಿಳಿಸಿದರು.

ಜೂನ್‌ನಲ್ಲಿ ಬೃಹತ್ ಸಮಾವೇಶ:

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 2026ರ ಜೂನ್ 4 ಮತ್ತು 5 ರಂದು ಈ ಬೃಹತ್ ಶೃಂಗಸಭೆ ನಡೆಯಲಿದೆ. ಈ ಅಭಿಯಾನದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ನಗರದ ಸುಸ್ಥಿರತೆಗಾಗಿ ಹೊಸ ಆಲೋಚನೆಗಳು ಹಾಗೂ ತಾಂತ್ರಿಕ ಪರಿಹಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಮಾಹಿತಿಗಾಗಿ ಜಾಲತಾಣ ಲಭ್ಯ:

ಸಾರ್ವಜನಿಕರು ಈ ಶೃಂಗಸಭೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ನೋಂದಾಯಿಸಿಕೊಳ್ಳಲು bengaluruclimatesummit.com ಜಾಲತಾಣವನ್ನು ವೀಕ್ಷಿಸಬಹುದಾಗಿದೆ.

 


Share this with Friends

Related Post