ಬೆಂಗಳೂರು: ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿ (ಪಿಂಕ್ ಲೈನ್) ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ) ವರೆಗೆ ನವೆಂಬರ್ 14ರಿಂದ ವಾಣಿಜ್ಯ ರೈಲು ಸಂಚಾರ ಆರಂಭವಾಗಿರುವ ಬೆನ್ನಲ್ಲೇ, ಪ್ರಯಾಣಿಕರ ಅನುಕೂಲಕ್ಕಾಗಿ 28 ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸಲಾಗಿದೆ.
ಪ್ರಯಾಣಿಕರಿಗೆ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕವನ್ನು (First and Last-Mile Connectivity) ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಬಿಎಂಆರ್ಸಿಎಲ್ (BMRCL) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಹಯೋಗದಲ್ಲಿ ಈ ಹೊಸ ಸೇವೆ ಆರಂಭಿಸಲಾಗಿದೆ ಎಂದು ನಿಗಮವು ಸೋಮವಾರ ತಿಳಿಸಿದೆ. ಈ ಫೀಡರ್ ಬಸ್ಗಳು ಜಯದೇವ ಆಸ್ಪತ್ರೆ, ಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ, ಹುಳಿಮಾವು ಹಾಗೂ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣಗಳನ್ನು ಸುತ್ತಮುತ್ತಲಿನ ವಸತಿ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಹಾಗೂ ಉದ್ಯೋಗ ತಾಣಗಳೊಂದಿಗೆ ಬೆಸೆಯಲಿವೆ.
ಹೊಸದಾಗಿ ಆರಂಭವಾಗಿರುವ 5 ಮೆಟ್ರೋ ಫೀಡರ್ ಬಸ್ ಮಾರ್ಗಗಳ ವಿವರ:
MF-18J
ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣ – ಉತ್ತರಹಳ್ಳಿ
ಡಾಲ್ಮಿಯ ವೃತ್ತ, ಜೆ.ಪಿ. ನಗರ 6ನೇ ಹಂತ, ಕದಿರೇನಹಳ್ಳಿ ಕ್ರಾಸ್, ಚಿಕ್ಕಲ್ಲಸಂದ್ರ ಅರಳಿಮರ
7 ಬಸ್ಗಳು / 126 ಟ್ರಿಪ್ಗಳು
MF-18JT
ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣ – ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣ (ವೃತ್ತಾಕಾರ)
ಡೈರಿ ವೃತ್ತ, ಸಿದ್ದಗುಂಟೆಪಾಳ್ಯ, ತಾವರೆಕೆರೆ, ಬಿಟಿಎಂ 16ನೇ ಮುಖ್ಯರಸ್ತೆ
3 ಬಸ್ಗಳು / 53 ಟ್ರಿಪ್ಗಳು
MF-18T
ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣ – ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣ (ವೃತ್ತಾಕಾರ)
ಕಾರ್ಮೆಲ್ ಕಾನ್ವೆಂಟ್, ಜಯನಗರ ಬಸ್ ನಿಲ್ದಾಣ, ಬನಶಂಕರಿ, ಜೆ.ಪಿ. ನಗರ 6ನೇ ಹಂತ, ಡಾಲ್ಮಿಯ ವೃತ್ತ, ಜಯದೇವ ಆಸ್ಪತ್ರೆ, ಡೈರಿ ವೃತ್ತ
6 ಬಸ್ಗಳು / 54 ಟ್ರಿಪ್ಗಳು
MF-18JP
ಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ ಮೆಟ್ರೋ ನಿಲ್ದಾಣ (ವೃತ್ತಾಕಾರ)
ಆರ್.ವಿ. ದಂತ ವೈದ್ಯಕೀಯ ಕಾಲೇಜು, ಪುಟ್ಟೇನಹಳ್ಳಿ, ಅರಕೆರೆ ಗೇಟ್, ಬಿಳೇಕಹಳ್ಳಿ
6 ಬಸ್ಗಳು / 72 ಟ್ರಿಪ್ಗಳು
MF-22HS
ಹುಳಿಮಾವು ಮೆಟ್ರೋ ನಿಲ್ದಾಣ – ಸಿಂಗಸಂದ್ರ ಮೆಟ್ರೋ ನಿಲ್ದಾಣ
ಜ್ಞಾನಪ್ಪನಹಳ್ಳಿ ಕ್ರಾಸ್, ಬೇಗೂರು ಕ್ರಾಸ್, ಚಿಕ್ಕಬೇಗೂರು
6 ಬಸ್ಗಳು / 96 ಟ್ರಿಪ್ಗಳು
ಮುಂದುವರಿಯಲಿರುವ ಹಳೆಯ ಫೀಡರ್ ಬಸ್ ಸೇವೆಗಳು:
ಈ ಐದು ಹೊಸ ಮಾರ್ಗಗಳ ಜೊತೆಗೆ ಈಗಾಗಲೇ ಕಾರ್ಯಾಚರಿಸುತ್ತಿರುವ ಈ ಕೆಳಗಿನ ಫೀಡರ್ ಬಸ್ ಸೇವೆಗಳೂ ಎಂದಿನಂತೆ ಮುಂದುವರಿಯಲಿವೆ:
MF-22HC (ಹುಳಿಮಾವು ಗೇಟ್ – ಸೆಂಟ್ರಲ್ ಸಿಲ್ಕ್ ಬೋರ್ಡ್): ವಿಜಯ ಬ್ಯಾಂಕ್ ಲೇಔಟ್, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ ಮಾರ್ಗವಾಗಿ ಸಂಚರಿಸಲಿದ್ದು, ಹುಳಿಮಾವು ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.
MF-18 (ಬನಶಂಕರಿ – ಕೋಳಿ ಫಾರಂ ಗೇಟ್): ಆರ್.ವಿ. ರಸ್ತೆ, ಜಯನಗರ ಮೆಟ್ರೋ ನಿಲ್ದಾಣ, ಬಿಳೇಕಹಳ್ಳಿ, ಹುಳಿಮಾವು ಗೇಟ್, ಗೊಟ್ಟಿಗೆರೆ ಮೂಲಕ ಸಂಚರಿಸಲಿದ್ದು, ಜಯದೇವ ಆಸ್ಪತ್ರೆ, ಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ, ಬಿಳೇಕಹಳ್ಳಿ-ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ನೀಡಲಿದೆ.
MF-45 (ಅನುಗ್ರಹ ಬಡಾವಣೆ – ವಿಜಯನಗರ ಟಿಟಿಎಂಸಿ): ಜೆ.ಪಿ. ನಗರ, ಕತ್ರಿಗುಪ್ಪೆ, ಮೈಸೂರು ರಸ್ತೆ, ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ಮಾರ್ಗವಾಗಿ ಸಂಚರಿಸಲಿದ್ದು, ಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.
ಪ್ರಯಾಣಿಕರು ತಮ್ಮ ದೈನಂದಿನ ಪ್ರಯಾಣವನ್ನು ಸುಗಮ ಮತ್ತು ಅನುಕೂಲಕರವಾಗಿಸಿಕೊಳ್ಳಲು ಈ ವಿಶೇಷ ಫೀಡರ್ ಬಸ್ ಸೇವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕು ಎಂದು ಬಿಎಂಆರ್ಸಿಎಲ್ ಮನವಿ ಮಾಡಿದೆ.

