Wed. Oct 21st, 2026

ಕಾಗವಾಡ ಪೊಲೀಸ್ ಠಾಣೆಯ‌ಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿಯ ಸಂಭ್ರಮ

Share this with Friends

ವರದಿ: ವಿಕಿಲ ಎಸ್. ಹಿರೇಮಠ

ಕಾಗವಾಡ : ಕಾಗವಾಡ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಪಿಎಸ್ಐ ರಾಘವೇಂದ್ರ ಖೋತ ದುರ್ಗಾದೇವಿ ಭಾವಚಿತ್ರಕ್ಕೆ ಹಾಗೂ ಠಾಣಾ ಆಯುಧಗಳಿಗೆ ಪೂಜೆ ಸಲ್ಲಿಸಿದರು.

ಪ್ರತಿ ವರ್ಷದಂತೆ ಪೊಲೀಸ್ ಠಾಣಾ ವಾಹನಗಳಿಗೂ ಪೂಜೆ ಸಲ್ಲಿಸಿ ಅಧಿಕಾರಿ ವರ್ಗಕ್ಕೆ ಮತ್ತು ಸಿಬ್ಬಂದಿಗಳಿಗೆ ಶುಭಾಶಯ ಕೋರಿ‌ ಸಿಹಿ‌‌ ಹಂಚಿ ಮಾತನಾಡಿ ಅವರು ಆಯುಧ ಪೂಜೆ ಹಾಗೂ ದಸರಾ ಸರ್ವರ ಜೀವನದಲ್ಲಿ ಒಳ್ಳೆಯದಾಗಲಿ ಎಂದರು.

ಇಲಾಖೆಯಲ್ಲಿ ತಮ್ಮ‌ ಜವಬ್ದಾರಿಯನ್ನು ಇನ್ನಷ್ಟು ಮೇಲದರ್ಜೆಗೆ ಕೊಂಡಯ್ಯೊದು ಠಾಣೆಗೆ ಒಳ್ಳೆಯ ಹೆಸರು ತನ್ನಿ ಎಂದು ಹಾರೈಸಿದರು.ಪೊಲೀಸ್ ಠಾಣಾ ಸಿಬ್ಬಂದಿಗಳು, ಸಶಸ್ತ್ರ ಮೀಸಲು ಪಡೆಯ. ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share this with Friends

Related Post