Sat. Jun 6th, 2026

ಆಂಧ್ರಪ್ರದೇಶದ ಅಧಿಕೃತ ರಾಜಧಾನಿಯಾಗಿ ‘ಅಮರಾವತಿ’ ಘೋಷಣೆ: ಮೋದಿ ಸರ್ಕಾರಕ್ಕೆ ಡಿಸಿಎಂ ಪವನ್ ಕಲ್ಯಾಣ್ ಧನ್ಯವಾದ

Share this with Friends

ಅಮರಾವತಿ:ದಶಕದ ಕಾಯುವಿಕೆ ಮತ್ತು ಅನಿಶ್ಚಿತತೆಗೆ ತೆರೆಬಿದ್ದಿದ್ದು, ಆಂಧ್ರಪ್ರದೇಶದ ಅಧಿಕೃತ ರಾಜಧಾನಿಯಾಗಿ ‘ಅಮರಾವತಿ’ಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ದೊರೆತಿದೆ. ಈ ಐತಿಹಾಸಿಕ ಬೆಳವಣಿಗೆಯನ್ನು ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಏಪ್ರಿಲ್ 6 ಆಂಧ್ರಪ್ರದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಿ, ಕೇಂದ್ರದ ಗೆಜೆಟ್ ಅಧಿಸೂಚನೆ ಹೊರಬೀಳುವ ಮೂಲಕ ಅಮರಾವತಿಯು ಅಧಿಕೃತವಾಗಿ ರಾಜ್ಯದ ರಾಜಧಾನಿಯಾಗಿದೆ. ಇದು ಆಂಧ್ರದ ಜನರ ಬಹುದಿನದ ಕನಸು,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ರೈತರ ತ್ಯಾಗಕ್ಕೆ ಸಂದ ಜಯ:

“ಅಮರಾವತಿ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ತ್ಯಾಗ ಮಾಡಿದ ರೈತರು ಮತ್ತು ಸತತವಾಗಿ ಹೋರಾಟ ನಡೆಸಿದ ಜನತೆಗೆ ಈ ಕ್ಷಣ ಅರ್ಪಿತವಾಗಿದೆ. ರಾಜ್ಯ ವಿಭಜನೆಯಾಗಿ 12 ವರ್ಷಗಳ ನಂತರ ನಮಗೆ ಅಧಿಕೃತ ರಾಜಧಾನಿ ಸಿಕ್ಕಿದೆ,” ಎಂದು ಪವನ್ ಕಲ್ಯಾಣ್ ಭಾವನಾತ್ಮಕವಾಗಿ ನುಡಿದಿದ್ದಾರೆ.

ಸ್ವರ್ಣ ಆಂಧ್ರದ ಗುರಿ:

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ. ಹಳೆಯ ಅಡೆತಡೆಗಳನ್ನು ಮರೆತು, ಭವಿಷ್ಯದ ಪೀಳಿಗೆಗಾಗಿ ‘ಸ್ವರ್ಣ ಆಂಧ್ರ 2047’ ಗುರಿಯೊಂದಿಗೆ ಭವ್ಯ ಅಮರಾವತಿಯನ್ನು ನಿರ್ಮಿಸಲು ಎಲ್ಲರೂ ಒಂದಾಗೋಣ ಎಂದು ಅವರು ಕರೆ ನೀಡಿದ್ದಾರೆ.

 


Share this with Friends

Related Post