ವರದಿ: ವಿಕಿಲ ಎಸ್. ಹಿರೇಮಠ
ಕಾಗವಾಡ: ದಿನನಿತ್ಯ ಯೋಗಾಸನದಿಂದ ಉತ್ತಮ ಹಾಗೂ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳುಬಹುದು ಎಂದು ಪಿಎಸ್ಐ ರಾಘವೇಂದ್ರ ಖೋತ ಹೇಳಿದರು.

12 ನೇ ಅಂತರಾಷ್ಡ್ರೀಯ ಯೋಗಾದಿನಾಚರಣೆ ಅಂಗವಾಗಿ ಕಾಗವಾಡ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ಯೋಗಾಭ್ಯಾಸ ಮಾಡುವ ಮುಖಾಂತರ ಕರೆ ನೀಡಿದರು.
ಎಎಸ್ಐ ಶ್ರೀಶೈಲ ಹಣಜಿ ಅವರು ಯೋಗಾಭ್ಯಾಸ ಮಾಡಿಸಿದರು. ಈ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

