ವರದಿ: ವಿಕಿಲ ಎಸ್. ಹಿರೇಮಠ
ಕಾಗವಾಡ: ಪ್ರಸ್ತುತ ದಿನದಲ್ಲಿ ಯೋಗಾಭ್ಯಾಸ ಬಹಳ ಪ್ರಮುಖವಾಗಿದೆ. ದಿನನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯವಂತರಾಗಿಲು ಸಹಾಯಕಾರಿಯಾಗುತ್ತದೆ ಎಂದು ಗ್ರೇಡ್- 2 ತಹಶೀಲ್ದಾರ ರಶ್ಮೀ ಜಕಾತೆ ಹೇಳಿದರು.

ರವಿವಾರ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲೂಕಾಡಳಿತವತಿಯಿಂದ ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಯೊಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಲುಷಿತ ನೀರು ಸೇರಿದಂತೆ ಆಹಾರ ಪದ್ದತಿಯಿಂದ ಆರೋಗ್ಯ ದುಷ್ಪರಿಣಾಮ ಬೀರುವುದನ್ನು ಯೋಗದಿಂದ ತಪ್ಪಿಸಬಹುದು ಎಂದರು
ಈ ಸಮಯದಲ್ಲಿ ಶಿರಸ್ತೇದಾರರ ವಿಜಯ ಚೌಗಲಾ, ಕಂದಾಯ ನಿರೀಕ್ಷಕರಾದ ರಫೀಕ ಮುಲ್ಲಾ, ಪಿಎಸ್ಐ ರಾಘವೇಂದ್ರ ಖೋತ, ಪ್ರಾಚಾರ್ಯರಾದ ಪಿ. ಬಿ.ನಂದ್ಯಾಳೆ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

