Wed. Oct 28th, 2026

ಕನ್ನಡ ರಾಜ್ಯೋತ್ಸವ: ರಾಜ್ಯದ ಎಲ್ಲಾ ಜಿಲ್ಲೆಗಳ ಧ್ವಜಾರೋಹಣ ಉಸ್ತುವಾರಿ ಸಚಿವರ ಅಧಿಕೃತ ಪಟ್ಟಿ ಪ್ರಕಟ

Share this with Friends

ಬೆಂಗಳೂರು: ಮುಂಬರುವ ನವೆಂಬರ್ 1ರ ಸುವರ್ಣ ಮಹೋತ್ಸವದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ, ಕರ್ನಾಟಕ ಸರ್ಕಾರವು ಧ್ಚಜಾರೋಹಣ ಸಂಬಂಧ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಉಳಿದ ಎಲ್ಲಾ 30 ಜಿಲ್ಲಾ ಕೇಂದ್ರಗಳಲ್ಲಿ ಅಧಿಕೃತವಾಗಿ ಧ್ವಜಾರೋಹಣ ನೆರವೇರಿಸಲು ಸಚಿವರುಗಳನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ರಾಜ್ಯ ಶಿಷ್ಟಾಚಾರ) ಅಧಿಕೃತ ಆದೇಶ ಹೊರಡಿಸಿದೆ.

ಅನಾರೋಗ್ಯ ಅಥವಾ ಇತರ ಯಾವುದೇ ಅನಿವಾರ್ಯ ಕಾರಣಗಳಿಂದಾಗಿ ನಿಗದಿತ ಸಚಿವರುಗಳು ಕಾರ್ಯಕ್ರಮಕ್ಕೆ ಗೈರುಹಾಜರಾದಲ್ಲಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ರವಿಕುಮಾರ್ ಪಿ.ಎಸ್. ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಎಲ್ಲಾ ೩೦ ಜಿಲ್ಲೆಗಳ ನಿಯೋಜಿತ ಸಚಿವರ ಸಂಪೂರ್ಣ ವಿವರ ಈ ಕೆಳಗಿನಂತಿದೆ:

೧.ತುಮಕೂರು

ಡಾ. ಜಿ. ಪರಮೇಶ್ವರ್  (ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಸಚಿವರು)

೨.ಚಿಕ್ಕಮಗಳೂರು

 ಕೆ.ಜೆ. ಜಾರ್ಜ್ ( ಇಂಧನ ಮತ್ತು ಪ್ರವಾಸೋದ್ಯಮ ಸಚಿವರು)

೩.ಬೆಂಗಳೂರು ಗ್ರಾಮಾಂತರ

ಕೆ.ಹೆಚ್. ಮುನಿಯಪ್ಪ ( ಸಮಾಜ ಕಲ್ಯಾಣ ಸಚಿವರು)

೪.ಕೋಲಾರ

 ರಾಮಲಿಂಗಾರೆಡ್ಡಿ ( ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರು)

೫.ವಿಜಯಪುರ

ಎಂ.ಬಿ. ಪಾಟೀಲ್ ( ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರು)

೬.ಬೆಳಗಾವಿ

 ಸತೀಶ್ ಜಾರಕಿಹೊಳಿ ( ಲೋಕೋಪಯೋಗಿ ಇಲಾಖೆ ಸಚಿವರು)

೭.ದಕ್ಷಿಣ ಕನ್ನಡ

 ಯು.ಟಿ. ಖಾದರ್ ( ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು)

೮.ಕಲಬುರಗಿ

ಪ್ರಿಯಾಂಕ್ ಖರ್ಗೆ ( ಗೃಹ ಮತ್ತು ಐಟಿಬಿಟಿ ಸಚಿವರು)

೯.ಬೀದರ್

ಈಶ್ವರ್ ಖಂಡ್ರೆ ( ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

೧೦.ಯಾದಗಿರಿ

ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ( ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು)

೧೧.ಗದಗ

 ಬಸವರಾಜ್ ರಾಯರೆಡ್ಡಿ ( ಉನ್ನತ ಶಿಕ್ಷಣ ಸಚಿವರು)

೧೨.ಮಂಡ್ಯ

ಎನ್. ಚಲುವರಾಯಸ್ವಾಮಿ ( ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು)

೧೩.ಚಿಕ್ಕಬಳ್ಳಾಪುರ

ಸುರೇಶ್ ಬಿ.ಎಸ್. ( ಸಾರಿಗೆ ಸಚಿವರು)

೧೪.ಮೈಸೂರು

ಡಾ. ಯತೀಂದ್ರ ಸಿದ್ದರಾಮಯ್ಯ ( ನಗರಾಭಿವೃದ್ಧಿ ಸಚಿವರು)

೧೫.ಧಾರವಾಡ

ಸಂತೋಷ್ ಎಸ್. ಲಾಡ್ ( ಕಾರ್ಮಿಕ ಮತ್ತು ಉದ್ಯೋಗ ಸಚಿವರು)

೧೬.ಕೊಪ್ಪಳ

ತಂಗಡಗಿ ಶಿವರಾಜ್ ಸಂಗಪ್ಪ ( ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು)

೧೭.ದಾವಣಗೆರೆ

ಎಸ್.ಎಸ್. ಮಲ್ಲಿಕಾರ್ಜುನ ( ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು)

೧೮.ಚಾಮರಾಜನಗರ

ಸಿ. ಪುಟ್ಟರಂಗಶೆಟ್ಟಿ ( ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು)

೧೯.ಶಿವಮೊಗ್ಗ

ಮಧು ಬಂಗಾರಪ್ಪ ( ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು)

೨೦.ಹಾವೇರಿ

 ರುದ್ರಪ್ಪ ಮಾನಪ್ಪ ಲಮಾಣಿ ( ಸಕ್ಕರೆ ಮತ್ತು ಜವಳಿ ಸಚಿವರು)

೨೧.ಬಳ್ಳಾರಿ

ಬಿ.ಝೆಡ್. ಜಮೀರ್ ಅಹಮದ್ ಖಾನ್ ( ವಸತಿ ಸಚಿವರು)

೨೨.ಉತ್ತರ ಕನ್ನಡ

ಲಕ್ಷ್ಮಣ ಸಂಗಪ್ಪ ಸವದಿ ( ಸಹಕಾರ ಸಚಿವರು)

೨೩.ಕೊಡಗು

ಪಿ.ಎಂ. ನರೇಂದ್ರಸ್ವಾಮಿ ( ಕೃಷಿ ಸಚಿವರು)

೨೪.ಹಾಸನ

ಕೆ.ಎಂ. ಶಿವಲಿಂಗೇಗೌಡ ( ಅಬಕಾರಿ ಸಚಿವರು)

೨೫.ಬಾಗಲಕೋಟೆ

 ವಿಜಯಾನಂದ ಕಾಶಪ್ಪನವರ್ ( ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರು)

೨೬.ಬೆಂಗಳೂರು ದಕ್ಷಿಣ

ಹೆಚ್. ಸಿ. ಬಾಲಕೃಷ್ಣ ( ಪೌರಾಡಳಿತ ಸಚಿವರು)

೨೭.ರಾಯಚೂರು

ಅಜಯ್ ಸಿಂಗ್ ( ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು)

೨೮.ಉಡುಪಿ

ರಿಜ್ವಾನ್ ಅರ್ಷದ್ ( ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು)

೨೯.ಚಿತ್ರದುರ್ಗ

ಟಿ. ರಘುಮೂರ್ತಿ ( ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರು)

೩೦.ವಿಜಯನಗರ

ಕೆ.ಎಸ್. ಬಸವಂತಪ್ಪ ( ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು)

 


Share this with Friends

Related Post