Thu. Aug 20th, 2026

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆ: ಮುಖ್ಯಮಂತ್ರಿ ಚಂದ್ರು ಸೇರಿ ಮೂವರಿಗೆ ಜೀವಮಾನ ಸಾಧನೆ ಗೌರವ!

Share this with Friends

ಬೆಂಗಳೂರು:ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಅತ್ಯುನ್ನತ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ಗೆ ಹಿರಿಯ ನಟ ಡಾ. ಮುಖ್ಯಮಂತ್ರಿ ಚಂದ್ರು (ಬೆಂಗಳೂರು ನಗರ), ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ (ಧಾರವಾಡ) ಮತ್ತು ಇಳಕಲ್‌ನ ರಮೇಶ ತಿಪ್ಪಣ್ಣ ಚಿತ್ರಗಾರ (ಬಾಗಲಕೋಟೆ) ಅವರು ಭಾಜನರಾಗಿದ್ದಾರೆ.

ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ:

ಶಿವಾನಂದ ತಗಡೂರು (ಹಾಸನ/ಬೆಂಗಳೂರು)

ಆರ್. ರಾಮಕೃಷ್ಣ (ಚನ್ನಯ್ಯ) (ದೇವನಹಳ್ಳಿ)

ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ (ಲಕ್ಕುಂಡಿ)

ಅಯ್ಯಣ್ಣ ಸ್ವಾಮಿ ಹಿರೇಮಠ (ಕಲಬುರಗಿ)

ಫಣಿಯಮ್ಮ ಎಚ್.ಎಸ್. (ಸಾಗರ)

ಮಲ್ಲಪ್ಪ ಭರಮಪ್ಪ ಕುರಿ (ಕೊಪ್ಪಳ)

ಕೆ.ಪಿ.ಸ್ವಾಮಿ (ಮಂಡ್ಯ)

ಸುಶೀಲಾ ಹೆಗಡೆ (ಮೂರೂರು, ಉತ್ತರ ಕನ್ನಡ)

ರಾಜಕುಮಾರ್ ಎಸ್. (ಬೆಂಗಳೂರು ನಗರ)

ಡಾ. ಎಂ. ಗಣೇಶ್ ಹೆಗ್ಗೋಡು (ಶಿವಮೊಗ್ಗ)

ಪ್ರದೀಪ್ ಚಂದ್ರ ಕುತ್ಪಾಡಿ (ಉಡುಪಿ)

ನಂದ ಹಳೆಮನೆ (ಮೈಸೂರು)

ಗದಿಗೆಯ್ಯಾ ವಿ. ಹಿರೇಮಠ (ಬೆಳಗಾವಿ)

ಎನ್.ಎಂ.ಲಕ್ಷ್ಮಯ್ಯ (ಕೋಲಾರ)

ದತ್ತಿ ನಿಧಿ ಪುರಸ್ಕಾರದ ವಿಜೇತರು:

ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರಕ್ಕೆ ಬಿ.ಜಿ.ಶ್ರೀಧರ, ಬಿ.ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರಕ್ಕೆ ವಿಜಯಪುರದ ಅಶ್ವಾಕ ಹುಸೇನ ಹಾಗೂ ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ತುಮಕೂರಿನ ಗಂಗಾಧರ ರೆಡ್ಡಿ ವಿ.ಆರ್. ಅವರನ್ನು ಆಯ್ಕೆ ಮಾಡಲಾಗಿದೆ. ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ವೈ.ಎನ್. ಶಿವಣ್ಣ ಹಾಗೂ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ಚಿತ್ರದುರ್ಗದ ಸಾಣೇಹಳ್ಳಿಯ ಚಂದ್ರಮ್ಮ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಎಲ್ಲಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

 


Share this with Friends

Related Post