ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಸಿನಿಮಾ ರಂಗದಲ್ಲಿ ಆಸಕ್ತಿಯಿರುವ ಯುವ ಉದಯೋನ್ಮುಖ ಪ್ರತಿಭೆಗಳು ಮತ್ತು ಮಹಿಳೆಯರಿಗಾಗಿ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಬಯಸುವ ಆಸಕ್ತರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ವಿನೋದ್ ಚಂದ್ರ ತಿಳಿಸಿದ್ದಾರೆ.
ತರಬೇತಿ ಕಾರ್ಯಕ್ರಮಗಳ ವಿವರ:
ಸಿನಿ ಸಂವಾದ (3 ದಿನಗಳ ಕಾರ್ಯಾಗಾರ): 2026ರ ನವೆಂಬರ್ 14 ರಿಂದ 16 ರವರೆಗೆ ನಡೆಯಲಿದೆ. ಚಲನಚಿತ್ರ ಕ್ಷೇತ್ರದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಅಥವಾ ಆಸಕ್ತಿಯಿರುವ 21 ವರ್ಷ ಮೇಲ್ಪಟ್ಟ ಯುವ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಬರಹಗಾರರು, ನಟ-ನಟಿಯರು ಮತ್ತು ಸಿನಿಮಾಸಕ್ತರು ಇದರಲ್ಲಿ ಭಾಗವಹಿಸಬಹುದು.
ಮಹಿಳಾ ಸಿನಿ ಸಂವಾದ (1 ದಿನದ ಕಾರ್ಯಾಗಾರ): 2026ರ ನವೆಂಬರ್ 17 ರಂದು ನಡೆಯಲಿದೆ. 21 ವರ್ಷ ಮೇಲ್ಪಟ್ಟ ಆಸಕ್ತ ಯುವತಿಯರು ಮತ್ತು ಮಹಿಳೆಯರಿಗೆ ಚಲನಚಿತ್ರ ನಿರ್ಮಾಣದ ಕುರಿತು ವಿಶೇಷ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಅಕಾಡೆಮಿಯ ಅಧಿಕೃತ ವೆಬ್ಸೈಟ್ www.kca.karnataka.gov.in ಭೇಟಿ ನೀಡಿ ಅಥವಾ kca.filmmakingworkshop@gmail.com ಇಮೇಲ್ ಮುಖಾಂತರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.
ಪ್ರಮುಖ ದಿನಾಂಕ ಮತ್ತು ನಿಯಮಗಳು:
ಅರ್ಜಿ ಸಲ್ಲಿಸಲು 2026ರ ನವೆಂಬರ್ 10 ಕೊನೆಯ ದಿನವಾಗಿದೆ. ತಡವಾಗಿ ಬರುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ.
ಕಾರ್ಯಾಗಾರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಅಕಾಡೆಮಿಯ ವತಿಯಿಂದ ಯಾವುದೇ ವಸತಿ ಅಥವಾ ಪ್ರಯಾಣ ಭತ್ಯೆ (TA/DA) ಒದಗಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದೂರವಾಣಿ: 080-23493410 / 080-23493441 / ಮೊಬೈಲ್: 8904645529 (ಕಚೇರಿ ಅವಧಿಯಲ್ಲಿ ಮಾತ್ರ)
ಇಮೇಲ್: chalanachitraacademy@gmail.com
ವಿಳಾಸ: ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ ಸಂಕೀರ್ಣ, ನಂ.20/ಎ, ನಂದಿನಿ ಲೇಔಟ್, ಬೆಂಗಳೂರು – 560096.

