ಶಿವಮೊಗ್ಗ: ಗ್ರಾಮೀಣ ಭಾಗದ ಆರೋಗ್ಯ ಸೇವೆ ಸಬಲೀಕರಣ ಹಾಗೂ ಶಿಕ್ಷಣ ಪ್ರೋತ್ಸಾಹಿಸುವ ದ್ಯೇಯದೊಂದಿಗೆ, ಬೆಂಗಳೂರಿನ ಪ್ರಗತಿ ಆಟೋಮೇಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಕೇರ್ ಟ್ರಸ್ಟ್ (CARE Trust) ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚದಲ್ಲಿ ನಾಳೆ (ಅಕ್ಟೋಬರ್ 30, 2026) ಮತ್ತು ನಾಡಿದ್ದು (ಅಕ್ಟೋಬರ್ 31, 2026) ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
₹33 ಲಕ್ಷ ವೆಚ್ಚದ ಅತ್ಯಾಧುನಿಕ ALS ಅಂಬ್ಯುಲೆನ್ಸ್ ಹಸ್ತಾಂತರ ಸಮಾರಂಭ:

ಹುಂಚದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕರ ತುರ್ತು ಚಿಕಿತ್ಸಾ ಸೇವೆಗಾಗಿ ಪ್ರಗತಿ ಆಟೋಮೇಷನ್ ಸಂಸ್ಥೆಯ ಸಿ.ಎಸ್.ಆರ್ (CSR) ನಿಧಿಯಡಿ ದೇಣಿಗೆಯಾಗಿ ನೀಡಿರುವ ₹33 ಲಕ್ಷ ಮೌಲ್ಯದ ಸುಧಾರಿತ ಜೀವ ರಕ್ಷಕ ಸೌಲಭ್ಯವುಳ್ಳ (ALS) ಅಂಬ್ಯುಲೆನ್ಸ್ ಹಸ್ತಾಂತರ ಕಾರ್ಯಕ್ರಮವು ನಾಳೆ, ಅಕ್ಟೋಬರ್ 30 ರಂದು ಶುಕ್ರವಾರ ಮಧ್ಯಾಹ್ನ 12:00 ರಿಂದ 3:00 ರವರೆಗೆ ಹುಂಚದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆಯಲಿದೆ.
ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ: ಹುಂಚದ ಶ್ರೀ ಜೈನ ಮಠದ ಪೀಠಾಧೀಪತಿಗಳಾದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳು ಹಾಗೂ ದಾನಿಗಳು: ಪ್ರಗತಿ ಆಟೋಮೇಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅತುಲ್ ಎಸ್. ಭರಂಗಿ ಅವರು ಮುಖ್ಯ ಅತಿಥಿಗಳಾಗಿ ಹಾಗೂ ಅಂಬ್ಯುಲೆನ್ಸ್ ದಾನಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅಧ್ಯಕ್ಷತೆ: ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ (DHO) ಡಾ.ನಟರಾಜ್ ಕೆ.ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಸ್ಪತ್ರೆಗೆ ಜಾಗ ದೇಣಿಗೆ ನೀಡಿದ ಕುಟುಂಬದವರಾದ ನಿವೃತ್ತ ಶಿಕ್ಷಕಿ ಜಿ.ಎಸ್. ಸುಮಿತ್ರಮ್ಮ ಲೇಟ್ ದೇವರಾಜ್ ಅವರು ಆಹ್ವಾನಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗ್ರಾಮೀಣ ಶಿಕ್ಷಣ ಸಬಲೀಕರಣ – 260 ವಿದ್ಯಾರ್ಥಿಗಳಿಗೆ ನೆರವು:
ಕೇರ್ ಟ್ರಸ್ಟ್ ಸಂಸ್ಥೆಯ 29 ಮತ್ತು 30ನೇ ಸರಣಿ ಚಟುವಟಿಕೆಗಳ ಭಾಗವಾಗಿ ಗ್ರಾಮೀಣ ಹಿನ್ನೆಲೆಯ ಒಟ್ಟು 260 ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ಸ್ಟೇನ್‌ಲೆಸ್ ಸ್ಟೀಲ್ ವಾಟರ್ ಬಾಟಲಿಗಳನ್ನು ಉಚಿತವಾಗಿ ವಿತರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ 1: ಅಕ್ಟೋಬರ್ 30, ಶುಕ್ರವಾರ ಸಂಜೆ 4:00 ರಿಂದ 4:30 ರವರೆಗೆ ಹೊಂಡಲಗದ್ದೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಗುವುದು.
ಕಾರ್ಯಕ್ರಮ 2: ಅಕ್ಟೋಬರ್ 31, ಶನಿವಾರ ಬೆಳಿಗ್ಗೆ 9:00 ರಿಂದ 10:30 ರವರೆಗೆ ಹುಂಚದ ಪರಮಜ್ಯೋತಿ ಶಾಲೆಯಲ್ಲಿ ಎರಡನೇ ಹಂತದ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಗ್ರಾಮೀಣ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆ ಸುಲಭವಾಗಿ ಸಿಗುವಂತಾಗಲು ಹಾಗೂ ಶಾಲಾ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಹಮ್ಮಿಕೊಂಡಿರುವ ಈ ಉದಾತ್ತ ಕಾರ್ಯಕ್ರಮಗಳಲ್ಲಿ ಹುಂಚ ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೇರ್ ಟ್ರಸ್ಟ್ ಹಾಗೂ ಪ್ರಗತಿ ಆಟೋಮೇಷನ್ ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.
(ತುರ್ತು ಅಂಬ್ಯುಲೆನ್ಸ್ ಸೇವೆಗಾಗಿ ಸಂಪರ್ಕ ಸಂಖ್ಯೆ: 9738672240

