ಬೆಂಗಳೂರು: ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಇವು ಭಾರಿ ವೈರಲ್ ಆಗುತ್ತಿವೆ.
ಈ ವಿಶೇಷ ಪೋಸ್ಟ್ಗಳಲ್ಲಿ ತಂದೆ-ಮಕ್ಕಳ ಅಪರೂಪದ ಹಾಗೂ ತಮಾಷೆಯ ಜಗತ್ತು ಅನಾವರಣಗೊಂಡಿದೆ.
ರಾವಣನ ಲುಕ್ನಲ್ಲಿ ಯಶ್ ಕಾಮಿಡಿ ಸೆಲ್ಫಿ!
ಈ ಚಿತ್ರದಲ್ಲಿ ನಟ ಯಶ್ ಅವರು ಮುಂಬರುವ ತಮ್ಮ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ರಾವಣನ ಉಗ್ರ ರೂಪದ ಗೆಟಪ್ನಲ್ಲೇ ತಲೆಯಿಂದ ಕೆಳಗೆ ಹೊದಿಕೆಯನ್ನು ಹೊದ್ದುಕೊಂಡಿದ್ದಾರೆ. ಕಣ್ಣುಗಳನ್ನು ದೊಡ್ಡದಾಗಿ ಮಾಡಿ ವಿಚಿತ್ರ ಪ್ರಾಣಿಯ ಅಥವಾ ಕಾಡಿನ ಮನುಷ್ಯನಂತೆ ತಮಾಷೆಯ ಮುಖಭಾವದೊಂದಿಗೆ ಅವರು ಮಿರರ್ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ತಂದೆಯ ಈ ತಮಾಷೆಯ ಆಟಕ್ಕೆ ಸಾಥ್ ನೀಡಿರುವ ಮಗಳು ಆಯ್ರಾ ಮತ್ತು ಮಗ ಯಥರ್ವ್ ಕೂಡ ಹಲ್ಲು ಕಚ್ಚಿ, ಕ್ಯೂಟ್ ಆಗಿ ಮುಖ ತಿರುಚಿ ಪೋಸ್ ನೀಡಿರುವುದು ಅಭಿಮಾನಿಗಳ ಮನ ಗೆದ್ದಿದೆ. ಸಿನಿಮಾದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಯಶ್ ತಮ್ಮ ಮಕ್ಕಳೊಂದಿಗೆ ಎಷ್ಟು ಮುದ್ದಾಗಿ ಆಟವಾಡುತ್ತಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ.
ಮಾಲ್ಡೀವ್ಸ್ ಪ್ರವಾಸದ ಸುಂದರ ಕ್ಷಣಗಳು
ಇನ್ನು ಮತ್ತೊಂದು ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಇಡೀ ಕುಟುಂಬದ ಜೊತೆಗಿನ ಅದ್ಭುತ ಕ್ಷಣವನ್ನು ಹಂಚಿಕೊಂಡಿದ್ದಾರೆ. ಬೀಚ್ ರೆಸಾರ್ಟ್ನ ಮೆಟ್ಟಿಲುಗಳ ಮೇಲೆ ಕುಳಿತಿರುವ ನಟಿ ರಾಧಿಕಾ ಪಂಡಿತ್ ತಮ್ಮ ಮಡಿಲಿನಲ್ಲಿ ಮಗ ಯಥರ್ವ್ನನ್ನು ಕೂರಿಸಿಕೊಂಡಿದ್ದಾರೆ. ಅವರ ಹಿಂಭಾಗದಲ್ಲಿ ಬಿಳಿ ಶರ್ಟ್ ತೊಟ್ಟು ಕಡು ಗಡ್ಡದ ಸ್ಟೈಲಿಶ್ ಲುಕ್ನಲ್ಲಿ ಯಶ್ ಕಾಣಿಸಿಕೊಂಡಿದ್ದು, ಮಗಳು ಆಯ್ರಾಳನ್ನು ಮುದ್ದಾಗಿ ಹಿಡಿದುಕೊಂಡಿದ್ದಾರೆ. ತೆಂಗಿನ ಮರಗಳ ಹಿನ್ನೆಲೆಯಲ್ಲಿ ಇಡೀ ಕುಟುಂಬ ಪ್ರಕೃತಿಯ ಮಡಲಿನಲ್ಲಿ ನಗುತ್ತಾ ಪೋಸ್ ನೀಡಿರುವ ಈ ಚಿತ್ರ ನೆಟ್ಟಿಗರ ಕಣ್ಣಿಗೆ ತಂಪು ನೀಡಿದೆ.
ಅಭಿಮಾನಿಗಳಿಂದ ಪ್ರೀತಿಯ ಮಹಾಪೂರ:
ದೀಪಾವಳಿ ಹಬ್ಬದ ಈ ವಿಶೇಷ ಉಡುಗೊರೆಯನ್ನು ಕಂಡ ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಮೆಂಟ್ ಬಾಕ್ಸ್ನಲ್ಲಿ ಹಾರ್ಟ್ ಎಮೋಜಿಗಳನ್ನು ಹಾಕುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. “ರೀಲ್ ಲೈಫ್ನಲ್ಲಿ ಎಷ್ಟೇ ರಗಡ್ ಆಗಿದ್ದರೂ ರಿಯಲ್ ಲೈಫ್ನಲ್ಲಿ ಯಶ್ ಬಾಸ್ ಅತ್ಯುತ್ತಮ ತಂದೆ”, “ಯಥರ್ವ್ ಅಚ್ಚ ಅಪ್ಪನ ತರಹವೇ ಕಣ್ಣುಗಳನ್ನು ಉರುಳಿಸುತ್ತಿದ್ದಾನೆ” ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

